ಪರವಾನಿಗೆ ರಹಿತ ಓಲಾ-ಉಬರ್ ಟ್ಯಾಕ್ಸಿ ಸಂಚಾರಕ್ಕೆ ಕಡಿವಾಣ ಹಾಕಲು ಒತ್ತಾಯ
ಬೆಳಗಾವಿ, ನ. 20: ಆಟೊ ರಿಕ್ಷಾ ಚಾಲಕರಿಗೆ ವಸತಿ ಜತೆಗೆ ಆರೋಗ್ಯ ಸೌಲಭ್ಯ ಕಲ್ಪಿಸಬೇಕು ಎಂದು ಸಂಯುಕ್ತ ಕರ್ನಾಟಕ ಆಟೊ ರಿಕ್ಷಾ ಚಾಲಕರ ಮತ್ತು ಮಾಲಕರ ಕ್ಷೇಮಾಭಿವೃದ್ಧಿ ಸಂಘ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಆಗ್ರಹಿಸಿದೆ.
ಪರವಾನಿಗೆ ಇಲ್ಲದೆ ಸಂಚರಿಸುತ್ತಿರುವ ಓಲಾ, ಉಬರ್, ಟ್ಯಾಕ್ಸಿ ಸೇರಿದಂತೆ ಇನ್ನಿತರ ಮಾದರಿಯ ವಾಹನಗಳನ್ನು ಕೂಡಲೇ ನಿಲ್ಲಿಸಬೇಕು. ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯನ್ನು ಕಾಲ ಕಾಲಕ್ಕೆ ನಡೆಸಬೇಕು. ಆಟೊ ರಿಕ್ಷಾ ಚಾಲಕರ ಕುಟುಂಬಕ್ಕೆ ಕಾರ್ಮಿಕ ಇಲಾಖೆಯಿಂದ ವೈದ್ಯಕೀಯ ನೆರವು ಮತ್ತವರ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡಬೇಕು. ಖಾಸಗಿ ಲೇವಾದೇವಿ ಸಂಸ್ಥೆಗಳ ದೌರ್ಜನ್ಯ ತಡೆಗಟ್ಟಬೇಕು. ಪ್ರಯಾಣಿಕರ ಬೇಡಿಕೆಯನ್ವಯ ನಿಲ್ಲಿಸಿದಾಗ ಆಥವಾ ಹತ್ತಿಸಿಕೊಂಡಾಗ ಸಂಚಾರಿ ಕಾಯ್ದೆ ಉಲ್ಲಂಘನೆ ಮೊಕದ್ದಮೆ ದಾಖಲಿಸುವುದನ್ನು ರದ್ದುಗೊಳಿಸಬೇಕು ಎಂಬುದು ಸೇರಿದಂತೆ ಆಟೊರಿಕ್ಷಾ ಚಾಲಕರ ಎಲ್ಲ ಬೇಡಿಕೆ ಈಡೇರಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಸಂಘದ ಅಧ್ಯಕ್ಷ ಶ್ರೀನಿವಾಸಮಿತ್ರಿ ಒತ್ತಾಯ ಮಾಡಿದ್ದಾರೆ.