ತಿದ್ದುಪಡಿ ವಿಧೇಯಕಗಳಿಗೆ ಪರಿಷತ್‍ನಲ್ಲಿ ಅನುಮೋದನೆ

Update: 2017-11-20 17:01 GMT

ಬೆಳಗಾವಿ, ನ.20: ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಿಗಳ ತಿದ್ದುಪಡಿ ವಿಧೇಯಕ ಹಾಗೂ ಕರ್ನಾಟಕ ಕೆಲವು ಅಧಿನಿಯಮಗಳ ನಿರಸನಗೊಳಿಸುವ ಅಧಿನಿಯಮಗಳಿಗೆ ವಿಧಾನ ಪರಿಷತ್‍ನಲ್ಲಿ ಸೋಮವಾರ ಅನುಮೋದನೆ ದೊರೆಯಿತು.

ಭೂ ಅರ್ಜನಾ ಅಧಿನಿಯಮ 1894ನ್ನು ಭೂ ಅರ್ಜನಾ ಪುನರ್ವಸತಿ ಮತ್ತು ಪುನರ್‍ ವ್ಯವಸ್ಥೆಗಳಲ್ಲಿ ನ್ಯಾಯ ಸಮ್ಮತ ಪರಿಹಾರ ಮತ್ತು ಪಾರದರ್ಶಕತೆ ಹಕ್ಕು ಅಧಿನಿಯಮ 2013 ನಿರಸನಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಭೂ ಅರ್ಜನೆ, ಭೂಮಿಯ ಸ್ವಾಧೀನತೆಯನ್ನು ಅರ್ಜಿಸುವ ಮತ್ತು ಪರಿಹಾರ ನೀಡುವ ಉದ್ದೇಶದಿಂದ ತರಲಾಗಿರುವ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ತಿದ್ದುಪಡಿ ವಿಧೇಯಕವನ್ನು ವಿಧಾನ ಪರಿಷತ್‍ನಲ್ಲಿ ಅನುಮೋದಿಸಲಾಯಿತು.

2012ರಿಂದ 2015 ರವರೆಗಿನ ತಿದ್ದುಪಡಿ ಅಧಿನಿಯಮಗಳನ್ನು ಹಾಗೂ ಭಾರತದ ಪ್ರಧಾನಮಂತ್ರಿಗಳ ಕಚೇರಿ ಮೂಲಕ ರಚನೆಯಾದ ರಾಮಾನುಜನ್ ಸಮಿತಿ ಶಿಪಾರಸಿನಂತೆ ಪ್ರಾಮುಖ್ಯತೆ ಕಳೆದುಕೊಂಡ ಕಾನೂನುಗಳನ್ನು ನಿರಸನಗೊಳಿಸಬೇಕೆಂಬ ಹಿನ್ನೆಲೆಯಲ್ಲಿ ಭಾರತ ಕಾನೂನು ಆಯೋಗ ಮತ್ತು ರಾಮಾನುಜನ್ ಸಮಿತಿ ಶಿಫಾರಸು ಮಾಡಿರುವ ಪಟ್ಟಣಗಳಲ್ಲಿ ಸುಧಾರಣಾ ಅಧಿನಿಯಮ-1850, ಬೆಂಗಳೂರು ವಿವಾಹಗಳನ್ನು ಸಿಂಧೂಗೊಳಿಸುವ ಅಧಿನಿಯಮ ಸೇರಿದಂತೆ ವಿವಿಧ ಅಧಿನಿಯಮಗಳನ್ನು ನಿರಸನಗೊಳಿಸುವ ಕರ್ನಾಟಕ ಕೆಲವು ಅಧಿನಿಯಮಗಳನ್ನು ನಿರಸನಗೊಳಿಸುವ ವಿಧೇಯಕವನ್ನು ಪರಿಷತ್‍ನಲ್ಲಿ ಅಂಗೀಕರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News