ದಾವಣಗೆರೆ: ಅಪರಿಚಿತ ಮೃತದೇಹ ಪತ್ತೆ
Update: 2017-11-21 18:44 IST
ದಾವಣಗೆರೆ, ನ.21: ಅಪರಿಚಿತ ವ್ಯಕ್ತಿಯೊರ್ವರ ಮೃತದೇಹ ಇಲ್ಲಿನ ಕೊಂಡಜ್ಜಿ ರಸ್ತೆಯ ಸೇವಾ ನಗರದ ಚರಂಡಿಯಲ್ಲಿ ಮಂಗಳವಾರ ಬೆಳಗ್ಗೆ ಪತ್ತೆಯಾಗಿದೆ.
ಇಲ್ಲಿನ ಸೇವಾ ನಗರದ ಚರಂಡಿಯಲ್ಲಿ ಮೃತದೇಹದ ಕಾಲುಗಳು ಕಂಡ ಮಹಿಳೆಯೊಬ್ಬರು ಸ್ಥಳೀಯರಿಗೆ ವಿಷಯ ಮುಟ್ಟಿಸಿದ್ದಾರೆ. ಕಳೆದ ಮೂರು ದಿನಗಳ ಹಿಂದೆಯೇ ಚರಂಡಿಯಲ್ಲಿ ಮೃತದೇಹ ಬಿದ್ದಿದ್ದು, ತಲೆಯ ಭಾಗವನ್ನು ಹಂದಿ, ನಾಯಿಗಳು ತಿಂದಿದ್ದರಿಂದ ಅದು ಯಾರ ಮೃತದೇಹವೆಂದು ಗುರುತಿಸಲಾಗದಂತಾಗಿದೆ.
ಸುಮಾರು 25-30 ವರ್ಷ ವಯಸ್ಸಿನ ವ್ಯಕ್ತಿಯ ಮೃತದೇಹ ಇದಾಗಿದ್ದು, ಚರಂಡಿ ನೀರಿನಲ್ಲಿ ಶವ ತೇಲುತ್ತಿದ್ದಾಗ ಮಹಿಳೆ ಗಮನಕ್ಕೆ ಬಂದಿದೆ. ಮೃತ ವ್ಯಕ್ತಿ ಯಾರೆಂಬುದು ತಿಳಿದು ಬಂದಿಲ್ಲ.
ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ.
ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ಗಾಂಧಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.