×
Ad

ಅಂಗನವಾಡಿ ಸಹಾಯಕಿಯಿಂದ ದಲಿತ ಬಾಲಕನಿಗೆ ಬಿಸಿ ಸೌಟಿನಿಂದ ತಿವಿದು ಹಿಂಸೆ

Update: 2017-11-21 19:15 IST

ಚಾಮರಾಜನಗರ, ನ.21: ಅಂಗನವಾಡಿ ಸಹಾಯಕಿಯೊಬ್ಬರು ಬಾಲಕನಿಗೆ ಬಿಸಿ ಸೌಟಿನಿಂದ ತಿವಿದು ಹಿಂಸೆ ನೀಡಿದ ಘಟನೆ ತಾಲೂಕಿನ ಕೋಡಿಮೋಳೆ - ಬಸವಾಪುರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಸೋಮವಾರ ನಡೆದಿದೆ.

ಸವರ್ಣಿಯ ಶಿವಮಲ್ಲಮ್ಮ ದಲಿತ ಸಮೂದಾಯದ ಹರ್ಷಿತ್ ಬಾಲಕನಿಗೆ ಅಂಗನವಾಡಿ ಕಿಟಕಿಯಿಂದ ಬಿಸಿ ಸೌಟಿನಿಂದ ತಿವಿದ ಪರಿಣಾಮ ಮಗುವಿನ ಕುತ್ತಿಗೆಯ ಎಡ ಭಾಗ ಸುಟ್ಟಗಾಯಗಳಾಗಿದೆ.

ಬಾಲಕನ ಪೋಷಕರು ಜಿಲ್ಲಾಸ್ಪತ್ರೆಗೆ ಆಗಮಿಸಿ ಚಿಕಿತ್ಸೆ ಕೊಡಿಸಿದ ಬಳಿಕ ಪೊಲೀಸ್ ಠಾಣೆಗೆ ಅಂಗನವಾಡಿ ಸಹಾಯಕಿ ಶಿವಮಲ್ಲಮ್ಮ ವಿರುದ್ಧ ದೂರು ದಾಖಲಿಸಿದ್ದಾರೆ.

ಪ್ರಸ್ತುತ ಬಾಲಕ ಸುಟ್ಟಗಾಯಗಳಿಂದ ಚೇತರಿಸುತ್ತಿದ್ದು, ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೂ ಅಸ್ಪೃ ಶ್ಯತೆ ತೋರಿದ ಸಹಾಯಕಿ ಶಿವಮಲ್ಲಮ್ಮಳ ಮೇಲೆ ಕ್ರಮಕ್ಕೆ ಪೋಷಕರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News