×
Ad

ಕಾಂಗ್ರೆಸ್, ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು: ಅಯೂಬ್ ಖಾನ್

Update: 2017-11-21 22:49 IST

ಮೈಸೂರು,ನ.21: ಕಾಂಗ್ರೆಸ್ ಹಾಗೂ ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು, ಇವೆರಡು ಪಕ್ಷಗಳು ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಒಳ ಒಪ್ಪಂದದ ಮೂಲಕ ಆಡಳಿತ ನಡೆಸುತ್ತಿವೆ ಎಂದು ಇಂಡಿಯನ್ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷ ಅಯೂಬ್ ಖಾನ್ ಆರೋಪಿಸಿದ್ದಾರೆ.

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಅವರು, ಬಿಜೆಪಿ ಮತ್ತು ಕಾಂಗ್ರೆಸ್ ಒಳ ಒಪ್ಪಂದ ರಾಜಕಾರಣದಿಂದ ಕೇಂದ್ರದಲ್ಲಿ ಮೂರನೆ ಪಕ್ಷ ಆಡಳಿತಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಅದರಂತೆ ರಾಜ್ಯದಲ್ಲಿಯೂ ಮಾಜಿ ವಿರೋಧ ಪಕ್ಷದ ನಾಯಕ ಈಶ್ವರಪ್ಪ ಮತ್ತು ಸಿಎಂ ಸಿದ್ದರಾಮಯ್ಯನವರ ನಡುವೆ ಒಳ ಒಪ್ಪಂದವಾಗಿದ್ದು, ಈಶ್ವರಪ್ಪ ಕಾಂಗ್ರೆಸ್ ಎಜೆಂಟರಾಗಿದ್ದು, ಬ್ರಿಗೇಡ್ ಮೂಲಕ  ಬಿಜೆಪಿಯನ್ನು ಮುಗಿಸಲು ಯತ್ನಿಸುತ್ತಿದ್ದಾರೆ. ಇಂತಹ ಕೆಟ್ಟ ರಾಜಕಾರಣದಿಂದ ಪ್ರಜಾಪ್ರಭುತ್ವಕ್ಕೆ ಅಪಾಯವಿದೆ. ಇಂತಹ ಸ್ವಾರ್ಥ ರಾಜಕಾರಣಿಗಳಿಗೆ ತಕ್ಕ ಪಾಠ ಕಲಿಸಲು ಮುಂದಿನ ಚುನಾವಣೆಯಲ್ಲಿ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳು ಸ್ಪರ್ಧೆಗಿಳಿಯುಲಿದ್ದು, ಪಕ್ಷಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದರು.

ಪ್ರಧಾನಿ ನರೇಂದ್ರ ಮೋದಿಯವರ ಗುಜರಾತ್ ವಿಕಾಸ್ ಭಾಷಣ ಸತ್ಯಕ್ಕೆ ದೂರವಾಗಿದ್ದು, ಗುಜರಾತಿನಲ್ಲಿ ಯಾವುದೇ ಪ್ರಗತಿ ಸಾಧಿಸಿಲ್ಲ. ರೈತರಿಗೆ ವಿದ್ಯುತ್ತಿಲ್ಲ, ಗ್ರಾಮೀಣ ಭಾಗದಲ್ಲಿ ಸೂಕ್ತ ರಸ್ತೆ, ಆಸ್ಪತ್ರೆಗಳಿಲ್ಲ, ಇಂದಿಗೂ ಅಲ್ಲಿನ ಜನರು 30 ರಿಂದ 50 ರೂ. ಗಳಿಗಾಗಿ ನಿತ್ಯ ಕೂಲಿ ಮಾಡುತ್ತಿದ್ದು, ಗುಜರಾತ್ ರಾಜ್ಯವು ಅಭಿವೃದ್ಧಿಯೇ ಕಾಣದ ಬೆಂಗಾಡಾಗಿದೆ. ಗುಜರಾತಿನ ಹಲವಾರು ಬಿಜೆಪಿ ಮುಖಂಡರು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದು, ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದಿಂದ 25 ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಇದೇ ವೇಳೆ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ಸೈಯದ್ ಅಮನ್ನುಲ್ಲಾ, ಸಹ ಕಾರ್ಯದರ್ಶಿ ಅಸ್ರತ್, ಎಚ್.ಡಿ.ಕೋಟೆ ತಾಲ್ಲೂಕಿನ ನಟರಾಜು, ಗೋಪಾಲ್ ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News