ನ.25ರಂದು ಮಾಂಸ ಮಾರಾಟ ನಿಷೇಧ
Update: 2017-11-22 18:38 IST
ದಾವಣಗೆರೆ, ನ.22: ನ.25ರಂದು ಸೈಂಟ್ ಟಿ.ಎಲ್. ವಾಸ್‍ವಾನಿರವರ ಜನ್ಮ ದಿನದ ಪ್ರಯುಕ್ತ ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ಮಾಂಸದ ಉದ್ದಿಮೆ ನಡೆಸುತ್ತಿರುವ ಉದ್ದಿಮೆದಾರರಿಗೆ ಪ್ರಾಣಿ ವಧೆ, ಪ್ರಾಣಿ ಮಾಂಸ, ಹಾಗೂ ಮೀನಿನ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ. ಆದ್ದರಿಂದ ಅಂದು ಮಾಂಸ ಮಾರಾಟ ಮಾಡಿದ್ದಲ್ಲಿ ಪಾಲಿಕೆಯಿಂದ ಕಾನೂನು ಕ್ರಮ ಜರಗಿಸಲಾಗುವುದು ಎಂದು ಪಾಲಿಕೆ ಆಯುಕ್ತ ಎಚ್.ಬಿ. ನಾರಾಯಣಪ್ಪ ಪ್ರಕಟನೆಯಲ್ಲಿ ತಿಳಿಸಿದ್ದಾರೆ.