×
Ad

ಲಂಚ ಪಡೆಯುತ್ತಿದ್ದ ಅಧಿಕಾರಿಯ ಬಂಧನ

Update: 2017-11-22 18:46 IST

ಕಡೂರು, ನ.22: ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಫಲಾನುಭವಿ ಆಯ್ಕೆ ಸಂಬಂಧ ಲಂಚ ಪಡೆಯುತ್ತಿದ್ದ ತಾಲೂಕು ಅಭಿವೃದ್ಧಿ ಅಧಿಕಾರಿ ಬೋರಯ್ಯ ಅವರನ್ನು ಭಷ್ಟಾಚಾರ ನಿಗ್ರಹ ದಳ ಬಂಧಿಸಿದೆ.

ಬುಧವಾರ ಬೆಳಗ್ಗೆ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಹೊಟೇಲ್‍ನಲ್ಲಿ ಬೋರಯ್ಯ ಅವರು 5 ಸಾವಿರ ರೂ.ಲಂಚ ಪಡೆದ ಮರು ಕ್ಷಣವೇ ಭಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ತೆಗೆದುಕೊಂಡಿದ್ದಾರೆ.

ತಾಲೂಕಿನ ಲಕ್ಕೇನಹಳ್ಳಿ ವಾಸಿ ಆನಂದನಾಯ್ಕ ಅವರು ದಿನಸಿ ಅಂಗಡಿ ಪ್ರಾರಂಭಿಸುವ ಉದ್ದೇಶದಿಂದ ತನ್ನ ಪತ್ನಿ ಹೇಮಾವತಿ ಹೆಸರಿನಲ್ಲಿ ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ 2 ಲಕ್ಷ ಸಾಲ ಪಡೆಯಲು ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಫಲಾನುಭವಿ ಆಯ್ಕೆ ಮಾಡಲು ಬೋರಯ್ಯ ಅವರು 10 ಸಾವಿರ ರೂ. ಲಂಚ ಕೇಳಿದ್ದರೆಂದು ಹೇಳಲಾಗಿದೆ.

ಎಸಿಬಿ ಪಶ್ಚಿಮ ವಲಯ ವರಿಷ್ಠಾಧಿಕಾರಿ ಕುಮಾರಿ ಶೃತಿ ಅವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಬ್ರಿಜೇಶ್ ಮ್ಯಾಥ್ಯೂ, ಉಪ ನಿರೀಕ್ಷಕ ಕೃಷ್ಣಮೂರ್ತಿ ಸಿಬ್ಬಂದಿ ಶಶಿ, ದೇವರಾಜು, ಬಸವರಾಜು, ಜಯಕುಮಾರ್ ಲೋಕೇಶ್ ದಾಳಿಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News