ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶಕ್ಕೆ ಸಿಎಂ ಮನವಿ

Update: 2017-11-23 18:19 GMT

ಬೆಳಗಾವಿ, ನ.23: ಮಹದಾಯಿ, ಕಳಸಾ-ಬಂಡೂರಿ ನಾಲಾ ವಿವಾದ ಇತ್ಯರ್ಥಕ್ಕೆ ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶವಾಗದೆ, ಪರಿಹಾರ ಅಸಾಧ್ಯ. ಹೀಗಾಗಿ ಅವರು ಕೂಡಲೇ ಮಧ್ಯ ಪ್ರವೇಶಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಮನವಿ ಮಾಡಿದ್ದಾರೆ.

ಗುರುವಾರ ವಿಧಾನಸಭೆಯಲ್ಲಿ ಕಳಸಾ-ಬಂಡೂರಿ ವಿಶೇಷ ಚರ್ಚೆಗೆ ಉತ್ತರ ನೀಡಿದ ಅವರು, ನ್ಯಾಯಾಧೀಕರವೂ ಮಾತುಕಥೆ ಮೂಲಕ ವಿವಾದಕ್ಕೆ ಪರಿಹಾರ ಕಂಡುಕೊಳ್ಳಲು ಸೂಚನೆ ನೀಡಿದೆ. ಈ ಹಿಂದೆ ತೆಲುಗು ಗಂಗಾ ವಿಚಾರದಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಮಧ್ಯ ಪ್ರವೇಶಿರುವ ಉದಾಹರಣೆ ನಮ್ಮ ಮುಂದಿದೆ ಎಂದು ಉಲ್ಲೇಖಿಸಿದರು.

ಪ್ರಧಾನಿ ಮಧ್ಯ ಪ್ರವೇಶಕ್ಕೆ ಒತ್ತಾಯಿಸಿ ಈಗಾಗಲೇ ತಾನು ಮೂರು ಪತ್ರಗಳನ್ನು ಬರೆದಿರುವೆ. ಅಲ್ಲದೆ, ಗೋವಾ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೂ ಮಾತುಕತೆಗೆ ಪತ್ರ ಬರೆದಿದ್ದೇನೆ ಎಂದ ಅವರು, ಪ್ರಧಾನಿ ಮೋದಿಯವರು ಗೋವಾ ವಿಪಕ್ಷವನ್ನು ಒಪ್ಪಿಸಿ ಎಂದು ಹೇಳುತ್ತಾರೆ. ಆದರೆ, ವಿಪಕ್ಷಗಳನ್ನು ಒಪ್ಪಿಸುವುದು ಅವರ ಕೆಲಸ. ನಾವೂ ನಮ್ಮ ರಾಜ್ಯದ ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ವಪಕ್ಷ ಸಭೆ ನಡೆಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಒಂದು ತಿಂಗಳಲ್ಲಿ ಕಳಸಾ-ಬಂಡೂರಿ ವಿವಾದವನ್ನು ಒಂದು ತಿಂಗಳಲ್ಲಿ ಇತ್ಯರ್ಥಪಡಿಸುವುದಾಗಿ ಹೇಳಿದ್ದಾರೆ. ಕುರುಡನಿಗೆ ಕಣ್ಣು ಬೇಕು. ಅದು ಒಂದು ತಿಂಗಳೋ, ಹದಿನೈದು ದಿನಗಳಲ್ಲಿ ಬರುತ್ತದೆಯೋ ಬರಲಿ. ಪರಿಹಾರ ಕಲ್ಪಿಸಿದರೆ ಸ್ವಾಗತ. ಯಡಿಯೂರಪ್ಪ ಸಮಸ್ಯೆ ಪರಿಹರಿಸುವ ಭರವಸೆ ಇದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News