×
Ad

ನಟ ಚೇತನ್ ಅಭಿನಯದ ಸಿನಿಮಾ ಬಿಡುಗಡೆಗೆ ಸಂಘಪರಿವಾರ ಸಂಘಟನೆಗಳಿಂದ ಅಡ್ಡಿ, ಪ್ರತಿಭಟನೆ

Update: 2017-11-26 11:47 IST

ಚಾಮರಾಜನಗರ, ನ. 26: ನಟ ಚೇತನ್ ಹೇಳಿಕೆ ಖಂಡಿಸಿ ಭಗತ್ ಯುವ ಸೇನೆ ಹಾಗೂ ಆಜಾದ್ ಹಿಂದೂ ಸೇನೆಯ ಕಾರ್ಯಕರ್ತರು ಇಂದು ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಸಿ, ನಟ ಚೇತನ್ ಅಭಿನಯದ 'ಅತಿರಥ' ಚಿತ್ರದ ಫ್ಲೆಕ್ಸ್ ಗಳನ್ನು ಕಿತ್ತು ಹರಿದುಹಾಕಿದರು.

ರಾಜ್ಯದಲ್ಲಿ ನಡೆಯುತ್ತಿರು ಲಿಂಗಾಯತ ಸ್ವಾತಂತ್ರ್ಯ ಧರ್ಮದ ಹೋರಾಟದ ಮುಂಚೂಣಿಯಲ್ಲಿರುವ ಚೇತನ್, ದಿಡ್ಡಳಿ ಆದಿವಾಸಿಗಳ ಹೋರಾಟ, ಎಂಡೋಸಲ್ಫಾನ್ ಪೀಡಿತರ ಹೋರಾಟ, ದೇವದಾಸಿ ಪದ್ಧತಿ ನಿರ್ಮೂಲನೆಗಾಗಿ, ನಾಡು-ನುಡಿ, ರೈತ ಪರ ಹೋರಾಟಗಳಲ್ಲಿ ಚೇತನ್ ತೊಡಗಿಕೊಂಡವರು. ಬುದ್ಧ, ಬಸನ, ಅಂಬೇಡ್ಕರ್ ವಿಚಾರಧಾರೆಗೆ ಪ್ರಭಾವಿತರಾಗಿದ್ದಾರೆ.

ಹಿಂದೂ ಧರ್ಮವನ್ನು ಚೇತನ್ ಒಡೆಯುತ್ತಿದ್ದಾರೆಂದು ಆರೋಪಿಸಿ ಚಿತ್ರದ ವಿರುದ್ಧ ಪ್ರತಿಭಟನೆ ನಡೆಸಿ, ಚಿತ್ರ ಬಿಡುಗಡೆ ಆಗದಂತೆ ಅಡೆದರು ಎಂದು ತಿಳಿದುಬಂದಿದೆ.

ನಗರದ ಸಿಂಹ ಮೂವಿ ಪ್ಯಾರಡೈಸ್ ಚಿತ್ರ ಮಂದಿರದ ಎದುರು ಜಮಾಯಿಸಿದ ಪ್ರತಿಭಟನಕಾರರು ಚೇತನ್ ನಟನೆಯ ಅತಿರಥ ಚಿತ್ರದ ಪ್ರದರ್ಶನ ರದ್ದುಗೊಳಿಸುವಂತೆ ಒತ್ತಾಯಿಸಿದರು.

ನಟ ಚೇತನ್ ವೀರಶೈವ ಲಿಂಗಾಯತರನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಹಾಗೂ ಹಿಂದೂಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಕಾರರು 'ಅತಿರಥ' ಚಿತ್ರದ ಫ್ಲೆಕ್ ಅರಿದು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News