ಮೂವರು ಸುಲಿಗೆಕೋರರ ಬಂಧನ
ತುಮಕೂರು,ನ.26:ನಗರದಲ್ಲಿ ಒಂಟಿಯಾಗಿ ಓಡಾಡುವ ಜನರಿಗೆ ಚಾಕು ತೋರಿಸಿ ಹೆದರಿಸಿ ಸುಲಿಗೆ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ತುಮಕೂರಿನ ನಗರ ಪೊಲೀಸ್ ಠಾಣಾ ಸರಹದ್ದು ಬಾವಿಕಟ್ಟೆ ಪೆಟ್ರೋಲ್ ಬಂಕ್ ಬಳಿ ಅಕ್ಟೋಬರ್ 22 ರಂದು ಬಾವಿಕಟ್ಟೆ ಕಲ್ಯಾಣ ಮಂಟಪಕ್ಕೆ ಮದುವೆ ಕಾರ್ಯಕ್ರಮಕ್ಕೆ ಬಂದಿದ್ದ ಆನಂದ್ ಎಂಬವರಿಗೆ ಮಧ್ಯರಾತ್ರಿ ಆರೋಪಿಗಳಾದ ಜಮೀಲ್ (19),ನೂರ್ ಅಹಮದ್ (19)ಮುಭಾರಕ್ (19) ಅವರುಗಳು ಚಾಕು ತೋರಿಸಿ, ಅವರ ಬಳಿ ಇದ್ದ ಹಣ, ಬೆಲೆ ಬಾಳುವ ವಸ್ತುಗಳನ್ನು ದೊಚಿದ್ದರು.
ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ 2 ದ್ವಿಚಕ್ರ ವಾಹನ, ಒಂದು ಚಾಕು, 70,000ರೂ. ನಗದು,20 ಗ್ರಾಂ ಬಂಗಾರದ ಕೈ ಚೈನು, 6 ಗ್ರಾಂ ಬಂಗಾರದ ಉಂಗುರವನ್ನು ಮತ್ತು ಮೊಬೈಲ್ ಪೋನನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳನ್ನು ಬಂಧಿಸಿದ ಪೊಲೀಸರನ್ನು ಪ್ರಶಂಶಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯ ಗೋಪಿನಾಥ್,ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ವಯಸ್ಸಿನ ಹುಡುಗರು,ಮೋಜು ಮಸ್ತಿಗಾಗಿ ಹಣ ಗಳಿಸಲು ಬೇರೆ ದಾರಿ ಹಿಡಿಯುತ್ತಿದ್ದು ಇಂತಹ ಘಟನೆಗಳಿಗೆ ಕಾರಣವಾಗುತ್ತದೆ. ಮನೆಯಲ್ಲಿ ಪೋಷಕರು ಮಕ್ಕಳ ಚಲನವಲನಗಳ ಬಗ್ಗೆ ನಿಗಾವಹಿಸಲು ಮನವಿ ಮಾಡಿದ್ದಾರೆ.