×
Ad

ವಿರಾಜಪೇಟೆಯಲ್ಲಿ ಮೀಲಾದುನ್ನಬಿ ಘೋಷಣಾ ಮೆರವಣಿಗೆ

Update: 2017-11-26 17:37 IST

ಮಡಿಕೇರಿ,ನ.26:ಅನ್ವಾರುಲ್ ಹುದಾ ವತಿಯಿಂದ ವಿರಾಜಪೇಟೆಯಲ್ಲಿ ಬೃಹತ್  ಮೀಲಾದುನ್ನಬಿ ಘೋಷಣಾ ಮೆರವಣಿಗೆ ನಡೆಯಿತು.ಶೈಖುನಾ ಮಹ್ಮೂದ್ ಉಸ್ತಾದ್ ಎಡಪ್ಪಾಲಂ ಮೆರವಣಿಗೆಗೆ ಚಾಲನೆ ನೀಡಿದರು. 

ಅನ್ವಾರುಲ್ ಹುದಾ ಸಂಸ್ಥೆಯ ವಿದ್ಯಾರ್ಥಿಗಳು, ಅಧ್ಯಾಪಕರು, ದಫ್ ಹಾಗೂ ಸ್ಕೌಟ್ಸ್ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ರ್ಯಾಲಿಯ ಸಮಾರೋಪ ಸಮಾರಂಭವನ್ನು ಕರ್ನಾಟಕ ರಾಜ್ಯ ಎಸ್‍ವೈಎಸ್ ಸದಸ್ಯ ಉಮರ್ ಸಖಾಫಿ ಎಡಪಾಲಂ ಉದ್ಘಾಟಿಸಿದರು.

ಮೀಲಾದ್ ರ್ಯಾಲಿಯ ಸಂದೇಶ ಭಾಷಣವನ್ನು ರಾಜ್ಯ ಎಸ್‍ಎಸ್‍ಎಫ್ ಕ್ಯಾಂಪಸ್ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಳಕೇರಿ ಮಾತನಾಡಿ, ಶಾಂತಿಯ ಸಂದೇಶವನ್ನು ಸಾರಿದ ಪ್ರವಾದಿ (ಸ) ರವರ ಜೀವನವು ಜಗತ್ತಿಗೆ ಮಾರ್ಗದರ್ಶನವಾಗಿದೆ. ಪ್ರವಾದಿ (ಸ) ರವರು ತೋರಿಸಿ ಕೊಟ್ಟ ಸಮಾನತೆಯ, ಸೌಹಾರ್ದತೆಯ ಜೀವನವನ್ನು ಮೈಗೂಡಿಸಿದರೆ ಪ್ರಸ್ತುತ ಜಗತ್ತಿನ ಸರ್ವ ಸಮಸ್ಯೆಗಳನ್ನು ದೂರಮಾಡಬಹುದು, ಅನ್ವಾರುಲ್ ಹುದಾ ಸಂಸ್ಥೆಯ ಅಧೀನದಲ್ಲಿ ಹುಬ್ಬುನ್ನಬಿ ಸಮಾವೇಶವು ಡಿಸೆಂಬರ್ 14 ರಿಂದ 17 ರವರೆಗೆ ಅನ್ವಾರ್ ಕ್ಯಾಂಪಸ್ಸಿನಲ್ಲಿ ನಡೆಯಲಿದೆ ಎಂದರು.  

ವೇದಿಕೆಯಲ್ಲಿ ಎಸ್.ಎಸ್.ಎಫ್ ಜಿಲ್ಲಾಧ್ಯಕ್ಷ ಕರೀಂ ಫಾಝಿಲಿ, ಎಸ್.ಎಸ್.ಎಫ್ ರಾಜ್ಯ ಸಮಿತಿ ಸದಸ್ಯ ರಫೀಕ್ ಸಖಾಫಿ, ಮುಬಶ್ಶಿರ್ ಅಹ್ಸನಿ , ಅನ್ವಾರುಲ್ ಹುದಾ ಮುದರ್ರಿಸರಾದ ಇಸ್ಮಾಯಿಲ್ ಸಖಾಫಿ, ಅಬ್ದುಲ್ ರಶೀದ್ ಸಅದಿ, ಶಫೀಖ್ ಸಖಾಫಿ, ಅಬ್ದುಲ್ ರಹ್ಮಾನ್ ಅಹ್ಸನಿ ಹಾಗೂ ಅಬೂಬಕ್ಕರ್ ಹಾಜಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News