ಡಿ.17ರಂದು ಕಡೂರು ಪಟ್ಟಣದ 14ನೇ ವಾರ್ಡಿನ ಮರು ಚುನಾವಣೆ
Update: 2017-11-26 17:46 IST
ಕಡೂರು, ನ.26: ಕಡೂರು ಪುರಸಭೆ 14ನೇ ವಾರ್ಡಿನ ಸದಸ್ಯರಾಗಿದ್ದ ಎಂ. ರೇಣುಕಾರಾಧ್ಯ ಇವರ ನಿಧನದಿಂದಾಗಿ ತೆರವಾಗಿರುವ ಸ್ಥಾನಕ್ಕೆ ಡಿ.17ರಂದು ಚುನಾವಣೆ ನಡೆಸಲಾಗುವುದು ಎಂದು ಚುನಾವಣೆ ಆಯೋಗದ ಪ್ರಕಟಣೆ ತಿಳಿಸಿದೆ.
ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ನ.29 ರಂದು ಹೊರಡಿಸಲಿದ್ದು, ನಾಮಪತ್ರ ಸಲ್ಲಿಸಲು ಡಿ.6ರ ಬುಧವಾರ ಕೊನೆಯ ದಿನಾಂಕವಾಗಿರುತ್ತದೆ. ಡಿ.7ರಂದು ನಾಮಪತ್ರಗಳನ್ನು ಪರಿಶೀಲಿಸಲಾಗುವುದು. ಡಿ.9 ರಂದು ಉಮೇದುವಾರಿಕೆಯನ್ನು ಹಿಂಪಡೆಯಲು ಕೊನೆಯ ದಿನಾಂಕವಾಗಿದೆ.
ಡಿ.17ರ ಭಾನುವಾರ ಬೆಳಗ್ಗೆ 7 ರಂದ ಸಂಜೆ 5 ರವರೆಗೆ ಮತದಾನ ನಡೆಯಲಿದೆ. ಡಿ.19ರಂದು ಮರು ಮತದಾನ ಇದ್ದರೆ ಮತದಾನ ನಡೆಯಲಿದೆ. ಡಿ.20 ರಂದು ಮತಗಳ ಎಣಿಕೆ ಬೆಳಗ್ಗೆ 8 ಗಂಟೆಯಿಂದ ತಾಲ್ಲೂಕು ಕಛೇರಿಯಲ್ಲಿ ನಡೆಯಲಿದೆ ಎಂದು ಚುನಾವಣಾ ಆಯೋಗದ ಪುರಸಭೆ ಮುಖ್ಯಾಧಿಕಾರಿಗಳಿಗೆ ನೋಟಿಸಿನ ಮೂಲಕ ತಿಳಿಸಿದೆ.