×
Ad

ಚಂಪಾ ಹೇಳಿಕೆಗೆ ಅನಗತ್ಯ ಗೊಂದಲ ಬೇಡ: ಎಚ್.ಡಿ.ದೇವೇಗೌಡ

Update: 2017-11-26 18:05 IST

ರಾಯಚೂರು, ನ.26: ಮೈಸೂರಿನ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿ ಚಂಪಾ ಹೇಳಿಕೆ ಬಗ್ಗೆ ಅನಗತ್ಯ ಹುಯಿಲೆಬ್ಬಿಸುವುದು ಬೇಡ ಎಂದು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

ರವಿವಾರ ರಾಯಚೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ನಾಡು, ನುಡಿ ಮತ್ತು ಗಡಿ ಸಮಸ್ಯೆಗಳು ಪರಿಹಾರ ಕಾಣದ ಹಿನ್ನೆಲೆಯಲ್ಲಿ ಪ್ರಾದೇಶಿಕ ಪಕ್ಷದ ಅಗತ್ಯತೆಯ ಬಗ್ಗೆ ಅಥವಾ ಬೇರೊಂದು ಪಕ್ಷ ಬೆಂಬಲಿಸಲು ಹೇಳಿರಬಹುದು. ಈ ಬಗ್ಗೆ ಅನಗತ್ಯ ಗೊಂದಲ ಮೂಡಿಸುವುದು ಬೇಡ ಎಂದು ಹೇಳಿದರು.

ಜೆಡಿಎಸ್ ಪಕ್ಷಕ್ಕೆ ನಿಷ್ಠರಾಗಿರುವ ಹಾಲಿ ಶಾಸಕರನ್ನು ಯಾವುದೇ ಕಾರಣಕ್ಕೂ ಅಸ್ಥಿರಗೊಳಿಸಲ್ಲ. ಹಾಲಿ ಶಾಸಕರ ಸ್ಪರ್ಧೆ ವಿರೋಧಿಸುವವರಿಗೆ ಬೇರೆ ಕಡೆ ಸ್ಪರ್ಧಿಸಲು ಅವಕಾಶ ಮಾಡಿಕೊಡಲಾಗುುದು ಎಂದು ಭರವಸೆ ನೀಡಿದರು.

ಎಐಸಿಸಿ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಆಯ್ಕೆಯಾದರೆ ಅದರಿಂದ ಜೆಡಿಎಸ್‌ಗೆ ಯಾವುದೇ ಹಾನಿಯಿಲ್ಲ. ಆ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ್ದಿಲ್ಲ. ಕಾಂಗ್ರೆಸ್ ವಿರುದ್ಧದ ನಮ್ಮ ರಾಜಕೀಯ ಹೋರಾಟ ನಿರಂತರ. ರಾಜಕೀಯದಲ್ಲಿ ಪ್ರತಿಯೊಬ್ಬರಿಗೂ ಅವಕಾಶವಿದೆ.

ಪ್ರಜ್ವಲ್ ರೇವಣ್ಣ ಅವರಿಗೆ ಟಿಕೆಟ್ ನೀಡಿಕೆ ಬಗ್ಗೆ ಪಕ್ಷದ ನಾಯಕರು ನಿರ್ಧಾರ ಕೈಗೊಳ್ಳಲಿದ್ದಾರೆ. ಹಿಂದಿನ ಬಾಗಿಲಿನಿಂದ ಪ್ರವೇಶ ಮಾಡಿ ರಾಜಕೀಯವಾಗಿ ಬೆಳೆಯುವವರ ಬಗ್ಗೆ ಗಮನ ಕೊಡಬೇಕಿಲ್ಲ. ರಾಜಕೀಯ ನಾಯಕರಾಗುವ ಆಕಾಂಕ್ಷೆ ಹೊಂದಿದವರು ಜನರ ಮುಂದೆ ಹೋಗಿ ಅಗ್ನಿ ಪರೀಕ್ಷೆಗೆ ಒಳಪಟ್ಟು ಗೆದ್ದು ಬರಬೇಕು. ಎಂ.ಪಿ.ರವೀಂದ್ರ ಕಾಂಗ್ರೆಸ್ ಬಿಟ್ಟ ವಿಚಾರ ತಿಳಿದಿಲ್ಲ. ಅವರನ್ನು ಜೆಡಿಎಸ್‌ಗೆ ಸೇರಿಸಿಕೊಳ್ಳವ ಬಗ್ಗೆ ಈಗಲೇ ಹೇಳಲಾಗದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News