×
Ad

ನಟ ರಂಗಾಯಣ ರಘು ರಾಜಕೀಯಕ್ಕೆ?

Update: 2017-11-26 18:31 IST

ಬೆಂಗಳೂರು, ನ.26: ಕನ್ನಡ ಚಿತ್ರರಂಗದ ನಟ ರಂಗಾಯಣ ರಘು ರಾಜಕೀಯಕ್ಕೆ ಸೇರಲು ತೆರೆಮರೆಯಲ್ಲಿ ಸಿದ್ಧತೆ ನಡೆಸಿದ್ದು, ಅಭಿಮಾನಿಗಳ ಒತ್ತಡದಿಂದಾಗಿ ರಾಜಕೀಯ ಸೇರಲು ಮನಸ್ಸು ಮಾಡಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ರಂಘಾಯಣ ರಘು ಅವರು ಜೆಡಿಎಸ್ ಸೇರುವ ವದಂತಿಯಿದ್ದು, ಅವರ ಕುಟುಂಬವೂ ಜೆಡಿಎಸ್ ಜೊತೆಗೆ ಗುರುತಿಸಿಕೊಂಡಿದೆ ಎನ್ನಲಾಗುತ್ತಿದೆ. ಮಾಜಿ ಪ್ರಧಾನಿಯಾದ ದೇವೇಗೌಡರು, ಮಾಜಿ ಸಿಎಂ ಕುಮಾರಸ್ವಾಮಿ ಅವರು ಸಾಕಷ್ಟು ಜನಪರ ಕಾಳಜಿ ಹೊಂದಿದ್ದಾರೆ. ಜಾತ್ಯತೀತ ನಿಲುವನ್ನು ಪಕ್ಷ ಹೊಂದಿದೆ. ಹೀಗಾಗಿ ಜೆಡಿಎಸ್ ಸೇರ್ಪಡೆ ಬಗ್ಗೆ ಒಲವು ತೋರುತ್ತಿರುವುದಾಗಿ ತಿಳಿದು ಬಂದಿದೆ.

ಕಳೆದ ಬಾರಿಯೇ ಮಧುಗಿರಿ ಕ್ಷೇತ್ರದಿಂದ ಸ್ಪರ್ಧಿಸಲು ರಘು ಆಕಾಂಕ್ಷೆ ಹೊಂದಿದ್ದರು. ಆ ಹಿನ್ನೆಲೆಯಲ್ಲಿ ತಮ್ಮ ಅಭಿಮಾನಿಗಳ ಜತೆ ಚರ್ಚಿಸಿ ಕುಮಾರಸ್ವಾಮಿ ಹಾಗೂ ದೇವೇಗೌಡರನ್ನು ಭೇಟಿಯಾಗಿ ಚರ್ಚಿಸುವುದಾಗಿ ರಂಗಾಯಣ ರಘು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News