ಅಕ್ರಮ ಮರಳು ಸಾಗಾಣೆ : ಇಬ್ಬರ ಬಂಧನ
Update: 2017-11-26 22:30 IST
ಶಿವಮೊಗ್ಗ, ನ. 26: ಯಾವುದೇ ಪರವಾನಿಗೆಯಿಲ್ಲದೆ ಕಾನೂನುಬಾಹಿರವಾಗಿ ಮರಳು ಸಾಗಾಣೆ ಮಾಡುತ್ತಿದ್ದ ಆರೋಪದ ಮೇರೆಗೆ ವಾಹನ ಸಮೇತ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ಪುಣಜೆ ಗ್ರಾಮದ ಹೊಸಮನೆ ಎಂಬಲ್ಲಿ ವರದಿಯಾಗಿದೆ.
ಪುರುಷೋತ್ತಮ್ ಹಾಗೂ ಗಣೇಶ್ ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ಇವರು ಯಾವುದೇ ಪರವಾನಿಗೆಯಿಲ್ಲದೆ ಮರಳು ಸಾಗಾಣೆ ಮಾಡುತ್ತಿದ್ದರು. 5 ಸಾವಿರ ರೂ. ಮೌಲ್ಯದ ಮರಳು ಹಾಗೂ ಅಕ್ರಮಕ್ಕೆ ಬಳಸಿದ್ದ ಮಹೀಂದ್ರ ಪಿಕ್‍ಅಪ್ ವಾಹನ, ಒಂದು ಬೈಕ್‍ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.