ಮದ್ದೂರು : ಮದ್ಯದಂಗಡಿಗಳಲ್ಲಿ ಸರಣಿ ಕಳ್ಳತನ
Update: 2017-11-26 22:57 IST
ಮದ್ದೂರು, ನ.26: ಪಟ್ಟಣದ ಹೆದ್ದಾರಿ ಪಕ್ಕದಲ್ಲಿರುವ ಮೂರು ಮದ್ಯದಂಗಡಿಗಳಲ್ಲಿ ಶನಿವಾರ ತಡರಾತ್ರಿ ಸರಣಿ ಕಳ್ಳತನ ನಡೆದಿದ್ದು, ಸಾವಿರಾರು ಮೌಲ್ಯದ ಮದ್ಯದ ಬಾಟಲಿ ಮತ್ತು ನಗದನ್ನು ದೋಚಲಾಗಿದೆ.
ಪಟ್ಟಣದ ವೈನ್ ಪ್ಯಾಲೇಸ್‍ನಲ್ಲಿ 15 ಸಾವಿರ ರೂ. ಮೌಲ್ಯದ ಮದ್ಯ, 2 ಸಾವಿರ ನಗದು, ಶಿವಪುರದ ಶ್ರೀನಿಧಿಬಾರ್‍ನಲ್ಲಿ 25 ಸಾವಿರ ರೂ. ಮದ್ಯ, 5 ಸಾವಿರ ನಗದು, ವೆಂಕಟೇಶ್ವರ ಬಾರ್‍ನಲ್ಲಿ 30 ಸಾವಿರ ರೂ. ಮೌಲ್ಯದ ಮದ್ಯ ಮತ್ತು 5 ಸಾವಿರ ನಗದು ಕಳವಾಗಿದೆ.
ಇದಲ್ಲದೆ ಅದೇ ರಾತ್ರಿ ತಾಲೂಕಿನ ನಿಡಘಟ್ಟದ ಸಿದ್ದೇಶ್ವರ ಔಷಧಿ ಅಂಗಡಿಯ ಬಾಗಿಲು ಮುರಿದು 5 ಸಾವಿರ ನಗದು ಹಾಗೂ ಕಾಸ್ಮೆಟಿಕ್ಸ್ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ.
ಕಳ್ಳತನ ಸೇರಿದಂತೆ ಹಲವು ಅಪರಾಧ ಪ್ರಕರಣಗಳು ಪಟ್ಟಣದಲ್ಲಿ ಮರುಕಳಿಸುತ್ತಿರುವುದರಿಂದ ಆತಂಕಕ್ಕೊಳಗಾಗಿರುವ ನಾಗರಿಕರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.