2018ರ ದೀಪಾವಳಿ ಅಯೋಧ್ಯೆಯ ರಾಮ ಮಂದಿರದಲ್ಲಿ : ಸುಬ್ರಮಣಿಯನ್ ಸ್ವಾಮಿ

Update: 2017-11-26 17:43 GMT

ಮಡಿಕೇರಿ, ನ.26: 2018ರಲ್ಲಿ ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲಿದ್ದು, ಮುಂದಿನ ದೀಪಾವಳಿ ಹಬ್ಬವನ್ನು ಅಲ್ಲೇ ಆಚರಿಸಲಾಗುವುದು ಎಂದು ರಾಜ್ಯ ಸಭಾ ಸದಸ್ಯ ಡಾ.ಸುಬ್ರಮಣಿಯನ್ ಸ್ವಾಮಿ ತಿಳಿಸಿದ್ದಾರೆ.

ನಗರದಲ್ಲಿ ನಡೆದ ಕೊಡವ ನ್ಯಾಷನಲ್ ಡೇ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಸೀದಿಗಳನ್ನು ಎಲ್ಲಿ ಬೇಕಾದರೂ ನಿರ್ಮಿಸಬಹುದು. ಆದರೆ ದೇಶದ ಹಿಂದೂಗಳ ಭಾವನೆಯ ಪ್ರತೀಕವಾದ ರಾಮ ಜನ್ಮಭೂಮಿಯಲ್ಲೇ ರಾಮಮಂದಿರ ನಿರ್ಮಾಣವಾಗಬೇಕೆಂದರು.

ಉತ್ತರ ಪ್ರದೇಶದಲ್ಲಿ ಮುಸಲ್ಮಾನ ಮಹಿಳೆಯರು ಬಿಜೆಪಿಗೆ ಮತ ಹಾಕಿದ ಕಾರಣದಿಂದಲೇ ಬಿಜೆಪಿ ಅಭೂತ ಪೂರ್ವ ಸ್ಥಾನಗಳನ್ನು ಗೆಲ್ಲುವ ಮೂಲಕ ಸರಕಾರ ರಚಿಸುವಂತಾಯಿತು ಎಂದು ಅವರು ಅಭಿಪ್ರಾಯಿಸಿದರು.

ನೆಹರೂ ಕುಟುಂಬ ಯಾವುದೇ ಪರೀಕ್ಷೆ ಪಾಸು ಮಾಡಿಲ್ಲ

ಸೋನಿಯಾಗಾಂಧಿ ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಪದವಿ ಪಡೆದಿಲ್ಲ. ಪಡೆದಿರುವುದಾಗಿ ಸುಳ್ಳು ಹೇಳುತ್ತಿದ್ದಾರೆ. ಜವಾಹರಲಾಲ್ ನೆಹರೂ ಸಹಿತ ಇಡೀ ನೆಹರೂ ಕುಟುಂಬ ಯಾವುದೇ ಪರೀಕ್ಷೆಯನ್ನು ಪಾಸು ಮಾಡಿಲ್ಲ ಎಂದು ಸುಬ್ರಮಣಿಯನ್ ಸ್ವಾಮಿ ನೆಹರೂ ಕುಟುಂಬದ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಭವಿಷ್ಯದಲ್ಲಿ ಸಂಸ್ಕೃತ ಸಂಪರ್ಕ ಭಾಷೆ
ದೇಶದ ಎಲ್ಲಾ ರಾಜ್ಯಗಳ ಭಾಷೆಗಳಲ್ಲೂ ಸಂಸ್ಕೃತ ಭಾಷೆ ಬೆರೆತಿದೆ ಎಂದು ಹೇಳಿದ ರಾಜ್ಯ ಸಭಾ ಸದಸ್ಯ ಡಾ.ಸುಬ್ರಮಣಿಯನ್ ಸ್ವಾಮಿ, ಭವಿಷ್ಯದಲ್ಲಿ ರಾಜ್ಯ ರಾಜ್ಯಗಳ ನಡುವಿನ ಸಂಪರ್ಕ ಭಾಷೆ ಸಂಸ್ಕೃತವೇ ಆಗಲಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News