ಢೋಂಗಿ ಜಾತ್ಯತೀತವಾದಕ್ಕೆ ಸಮ್ಮೇಳನ ವೇದಿಕೆ ಬಳಕೆ ಸಲ್ಲದು: ಅನಂತಕುಮಾರ್

Update: 2017-11-26 18:14 GMT

ಮೈಸೂರು,ನ.26: ಢೋಂಗಿ ಜಾತ್ಯತೀತವಾದ ಮತ್ತು ರಾಜಕಾರಣಕ್ಕೆ ಕನ್ನಡ ಸಮ್ಮೇಳನವನ್ನು ವೇದಿಕೆ ಮಾಡಿಕೊಳ್ಳಬಾರದು ಎಂದು ಕೇಂದ್ರ ರಾಸಾಯನಿಕ, ರಸಗೊಬ್ಬರ ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಅನಂತಕುಮಾರ್ ಹೇಳಿದ್ದಾರೆ.

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಕಾರ್ಯಕ್ರಮದಲ್ಲಿ ರವಿವಾರ ಗೌರವ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಅಫ್ಝಲ್ ಗುರುವನ್ನು ಸಮರ್ಥಿಸುವ, ಕಾಶ್ಮೀರದ ಏಕತೆಗೆ ಧಕ್ಕೆ ತರುವಂತಹ ಮಾತುಗಳು ಜಾತ್ಯತೀತವಾದವಲ್ಲ. ಅವು ದೇಶ ವಿರೋಧಿ ಹೇಳಿಕೆಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರಕಾರ ಹೊಸದಿಲ್ಲಿಗೆ ಸರ್ವಪಕ್ಷ ನಿಯೋಗ ತೆಗೆದುಕೊಂಡು ಬರಲಿ. ಕನ್ನಡಕ್ಕೆ ಸಂಬಂಧಿಸಿದ ಎಲ್ಲ ಕೆಲಸಗಳಿಗೆ ಸಹಕಾರ ನೀಡಲು ನಾವು ಬದ್ಧ ಎಂದು ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News