ಜನಪ್ರಿಯತೆಯ ರಾಷ್ಟ್ರೀಯತೆಯಿಂದ ಆರ್ಥಿಕತೆಗೆ ಧಕ್ಕೆ: ರಘುರಾಮ್ ರಾಜನ್

Update: 2017-11-27 04:13 GMT

ಹೊಸದಲ್ಲಿ, ನ. 27: ಜನಪ್ರಿಯತೆಯ ರಾಷ್ಟ್ರೀಯತೆಯಿಂದ ದೇಶದ ಆರ್ಥಿಕ ಪ್ರಗತಿಗೆ ಧಕ್ಕೆಯಾಗುವ ಎಲ್ಲ ಸಾಧ್ಯತೆಯೂ ಇದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಗವರ್ನರ್ ರಘುರಾಮ್ ರಾಜನ್ ಎಚ್ಚರಿಸಿದ್ದಾರೆ.

ಬಹುತೇಕ ಸಮುದಾಯಗಳಲ್ಲಿ ತಾರತಮ್ಯಕ್ಕೆ ಒಳಗಾಗಿರುವ ಭಾವನೆ ಉಲ್ಬಣಿಸುವುದು ಇದಕ್ಕೆ ಕಾರಣ ಎಂದು ವಿಶ್ಲೇಷಿಸಿದ್ದಾರೆ.

ಟೈಮ್ಸ್ ಲಿಟ್‌ಫೆಸ್ಟ್ ಸಮಾರಂಭದ ಸಂವಾದವೊಂದರಲ್ಲಿ ಮಾತನಾಡಿದ ಅವರು, ವಿಶ್ವಾದ್ಯಂತ ಜನಪ್ರಿಯತೆಯ ರಾಷ್ಟ್ರೀಯತೆ ಹೆಚ್ಚುತ್ತಿದ್ದು, ಭಾರತ ಕೂಡಾ ಇದರಿಂದ ಹೊರತಾಗಿಲ್ಲ ಎಂದು ಹೇಳಿದರು.

"ಜನಪ್ರಿಯತೆಯ ರಾಷ್ಟ್ರೀಯತೆ ಆರ್ಥಿಕ ಪ್ರಗತಿಗೆ ಹಾನಿಕಾರಕ. ಇದು ವಿಭಜನಕಾರಿಯಾಗಿರುವುದರಿಂದ ಆರ್ಥಿಕತೆಯನ್ನು ಹಿಂದಕ್ಕೆ ಒಯ್ಯುತ್ತದೆ. ಬಹುತೇಕ ಸಮುದಾಯಗಳಿಗೆ ತಮ್ಮ ವಿರುದ್ಧ ತಾರತಮ್ಯ ಎಸಗಲಾಗಿದೆ ಎಂಬ ಭಾವನೆಯನ್ನು ಇದು ಬಲಗೊಳಿಸುತ್ತದೆ" ಎಂದರು.

"ಆರ್ಥಿಕ ಸಮಸ್ಯೆ (ಉದ್ಯೋಗ)ಯನ್ನು ಬಗೆಹರಿಸಲು ಒತ್ತು ನೀಡಬೇಕಾದ್ದು ಅಗತ್ಯ. ಬಹುಸಂಖ್ಯಾತ ಸಮುದಾಯಗಳ ಅಹವಾಲಿಗೆ ಹೆಚ್ಚು ಒತ್ತು ನೀಡುವುದೂ ಸರಿಯಲ್ಲ. ಏಕೆಂದರೆ ಅಲ್ಪಸಂಖ್ಯಾತರು ಐತಿಹಾಸಿಕವಾಗಿ ತಾರತಮ್ಯಕ್ಕೆ ಒಳಗಾಗಿದ್ದಾರೆ" ಎಂದು ರಾಜನ್ ವಿಶ್ಲೇಷಿಸಿದರು. ಜನಪ್ರಿಯತೆಯ ರಾಷ್ಟ್ರೀಯತೆ ಸದಾ ಆರ್ಥಿಕತೆಯ ಮುನ್ನಡೆಗೆ ತಡೆ ಎಂದು ಅವರು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News