×
Ad

ಕೊಳ್ಳೇಗಾಲ: ಜನಸ್ನೇಹಿ ಪೊಲೀಸ್ ತರಬೇತಿ ಕಾರ್ಯಗಾರಕ್ಕೆ ಚಾಲನೆ

Update: 2017-11-27 18:05 IST

ಕೊಳ್ಳೇಗಾಲ, ನ.27: ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಉಪವಿಭಾಗ ಪೊಲೀಸರಿಗೆ ಆಯೋಜಿಸಿದ್ದ ಎರಡು ದಿನಗಳ 'ಜನಸ್ನೇಹಿ ಪೊಲೀಸ್ ತರಬೇತಿ' ಕಾರ್ಯಕ್ರಮವನ್ನು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೀತಾ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಸಮಾಜದಲ್ಲಿ ನಡೆಯುವ ದೌರ್ಜನ್ಯವನ್ನು ಪ್ರತಿಯೊಬ್ಬ ಪೊಲೀಸರು ತಡೆಗಟ್ಟಬೇಕು. ಪೊಲೀಸ್ ಇಲಾಖೆಯಲ್ಲಿ ಹಲವಾರು ರೀತಿಯ ಸುಧಾರಣೆಗಳು ನಡೆಯುತ್ತಾ ಬಂದಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸುಧಾರಣೆ ಕೈ ಗೊಳ್ಳಬೇಕು ಎಂದು ಕರೆ ನೀಡಿದರು.

ಜನರೊಂದಿಗೆ ಉತ್ತಮ ಬಾಂಧವ್ಯ ಇರಿಸಿಕೊಂಡು ಜನಸ್ನೇಹಿ ಪೊಲೀಸ್ ಎನಿಸಿಕೊಳ್ಳುವ ನಿಟ್ಟಿನಲ್ಲಿ ಈ ಕಾರ್ಯಗಾರವನ್ನು ಆಯೋಜಿಸಲಾಗಿದ್ದು, ಪ್ರತಿಯೊಬ್ಬ ಸಿಬಂದ್ದಿಯು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಕಾರ್ಯಗಾರದಲ್ಲಿ ಡಿವೈಎಸ್ಪಿ ಪುಟ್ಟಮಾದಯ್ಯ, ಇನ್ ಸ್ಪೆಕ್ಟರ್‍ಗಳಾದ ರಾಜಣ್ಣ, ಶಿವಸ್ವಾಮಿ, ರಾಜೇಶ್, ಪುರುಷೋತ್ತಮ್, ಉಪನಿರೀಕ್ಷಕರಗಳಾದ ಮಧ್ಯನಾಯಕ್, ವನರಾಜು, ಮಂಜು, ಶ್ರೀಧರ್, ಪುಷ್ಷಲತ ಹಾಗೂ ಸಿಬ್ಬಂದಿ ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News