×
Ad

'ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿನಿಧಿ ಶುಲ್ಕಕ್ಕೆ ನಕಲಿ ರಶೀದಿ'

Update: 2017-11-27 18:55 IST

ಮಂಡ್ಯ, ನ.27: ಮೈಸೂರಿನಲ್ಲಿ ನಡೆದ 83ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸವವರಿಂದ ಪ್ರತಿನಿಧಿ ಶುಲ್ಕ ಪಡೆದು ನಕಲಿ ರಶೀದಿ ನೀಡಲಾಗಿದೆ ಎಂದು ಲೇಖಕ, ಸಾಹಿತಿ ಎಸ್.ಕೃಷ್ಣ ಸ್ವರ್ಣಸಂದ್ರ ಆರೋಪಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಮ್ಮೇಳನಕ್ಕೆ ಭಾಗವಹಿಸುವವ ಜಿಲ್ಲೆಯ ಅನೇಕರಿಂದ ಪ್ರತಿನಿಧಿ ಶುಲ್ಕ ಪಡೆದು, ನಕಲಿ ರಶೀದಿ ನೀಡಿ ವಂಚಿಸಲಾಗಿದೆ ಎಂದು ರಶೀದಿಯನ್ನು ಪ್ರದರ್ಶಿಸಿದರು.

ಈ ಬಗ್ಗೆ ಕೂಲಂಕುಷವಾಗಿ ತನಿಖೆಯಾದರೆ ಸತ್ಯಾಂಶ ಹೊರಬೀಳಲಿದ್ದು, ಜಿಲ್ಲಾಡಳಿತ ತನಿಖೆ ನಡೆಸಬೇಕು. ಜತೆಗೆ, ಈ ಸಂಬಂಧ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‍ಗೂ ದೂರು ನೀಡಲಾಗುವುದು ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಲೇಖಕ ರಾಮೇಗೌಡ ಹಾಗೂ ನಾಗೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News