ಕೇಂದ್ರದಿಂದ 14ಸಾವಿರ ರೂ. ವೇತನದ ಭರವಸೆ: ನಾಗರತ್ನಾ
ಮಡಿಕೇರಿ, ನ .27: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಮುಂದಿನ ಬಜೆಟ್‌ನಲ್ಲಿ 14 ಸಾವಿರ ರೂ. ವೇತನ ನಿಗದಿ ಪಡಿಸುವ ಕುರಿತು ಕೇಂದ್ರ ಸರಕಾರ ಭರವಸೆ ನೀಡಿದೆ ಎಂದು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯ ಮಡಿಕೇರಿ ತಾಲೂಕು ಅಧ್ಯಕ್ಷೆ ವಿ.ಎಚ್. ನಾಗರತ್ನಾ ತಿಳಿಸಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ವಿವಿಧ ಬೇಡಿಕೆಗಳ ನ್ನು ಈಡೇರಿಸುವಂತೆ ಆಗ್ರಹಿಸಿ ದಿಲ್ಲಿಯಲ್ಲಿ ನಡೆಸಲಾಗಿದ್ದ ಸಮಾವೇಶದಲ್ಲಿ ಕನಿಷ್ಠ ವೇತನ 18 ಸಾವಿರ ರೂ. ನೀಡಬೇಕು ಹಾಗೂ ನಿವೃತ್ತರಾದವರಿಗೆ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗಿತ್ತು.
ಮನವಿಯನ್ನು ಪುರಸ್ಕರಿಸಿದ ಕೇಂದ್ರ ಸರಕಾರ 14 ಸಾವಿರ ರೂ. ವೇತನ ನೀಡುವ ಭರವಸೆ ನೀಡಿದೆ ಎಂದು ನಾಗರತ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಂಘದ ಜಿಲ್ಲಾಧ್ಯಕ್ಷೆ ಎ.ಜಿ. ತಾರಾಮಣಿ, ಕಾರ್ಯದರ್ಶಿ ಸಿ.ಯು. ಪವಿತ್ರಾ, ಸುಜಾತಾ, ಖಜಾಂಚಿ ಗೀತಾ ಹಾಗೂ ಸೋಮವಾರಪೇಟೆ ತಾಲೂಕಿನ ಪದಾಧಿಕಾರಿಗಳಾದ ಕೆ.ಕೆ. ಶಾರದಾ, ಚಂದ್ರಲೇಖ, ಮೋಹನಾಕ್ಷಿ ಮತ್ತಿತರರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.