ಹನೂರು: ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ
ಹನೂರು, ನ.28: ವಾಲ್ಮೀಕಿ ಮಹರ್ಷಿಯವರು ರಚಿಸಿದ ಮಹಾಕಾವ್ಯವು ಇಡೀ ಪ್ರಪಂಚಕ್ಕೆ ಮಾದರಿ ಕಾವ್ಯವಾಗಿದ್ದು, ಇಂತಹ ಮಹಾ ಕಾವ್ಯದಿಂದ ಶ್ರೀರಾಮರಂತಹ ಮಹಾನ್ ಪುರಷರು ತನ್ನ ಹೆಂಡತಿ ಬಿಟ್ಟು ಉಳಿದ ಎಲ್ಲಾ ನನ್ನ ಸಹೋದರಿಯರು ಎಂಬ ಪೂಜ್ಯಾ ಭಾವನೆಯಿಂದ ಇಡೀ ವಿಶ್ವಕ್ಕೆ ಸಾರಿದರು ಎಂದು ಶ್ರೀ ಜಗದ್ಗುರು ವಾಲ್ಮೀಕಿ ಪ್ರಸನ್ನಾಂದ ಮಹಾಸ್ವಾಮಿ ತಿಳಿಸಿದ್ದಾರೆ.
ಪಟ್ಟಣದ ಗೌರಿ ಶಂಕರ ಕಲ್ಯಾಣ ಮಂಟಪದ ಸಮೀಪದ ಆವರಣದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಪ್ರತಿಯೊಂದು ಜಾತಿಗೂ ತನ್ನದೇ ಆದ ಕುಲ ಕಸಬುಗಳು ಇದ್ದು, ಅದರಂತೆ ಆವರ ಸಮುದಾಯಗಳ ಪೂಜ್ಯಾ ಮಹನೀಯರನ್ನು ನೆನಸುವುದು ಒಂದು ಮಹಾನ ಕಾರ್ಯ ಎಂದು ಹೇಳಿದರು.
ಕಿಮ್ಮನೇ ರತ್ನಾಕರ್‍ರವರು ಆಯೋಜಿಸಿದ್ದ ವಾಲ್ಮೀಕಿ ಜಯಂತಿಯಲ್ಲಿ 5 ಸಾವಿರ ಜನಸಂಖ್ಯೆಯಲ್ಲಿ ನಮ್ಮ ಜನಾಂಗದವರು ಪಾಲ್ಗೂಂಡು ನಾವು ಅಲ್ಪಸಂಖ್ಯಾತರಲ್ಲ ಎಂದು ಸಾಬೀತು ಮಾಡಿದವು ಮತ್ತು ರಾಜ್ಯದ ಸಿದ್ದರಾಮಯ್ಯನವರ ಸರ್ಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದು ವಾಲ್ಮೀಕಿ ಮಹರ್ಷಿಯವರ ಹೆಸರನ್ನು ವಿಧಾನಸೌದದ ಆವರಣದಲ್ಲಿ 2.5 ಏಕರೆ ಪ್ರದೇಶವನ್ನು ವಾಲ್ಮೀಕಿ ತಪೋವನ ಎಂದು ನಾಮಕರಣ ಮಾಡಿದೆ. ಈ ತಪೋವನದಲ್ಲೇ 12 ಅಡಿ ಎತ್ತರದ ಆದಿಕವಿ ವಾಲ್ಮಿಕಿ ಪುತ್ತಳಿ ನಿರ್ಮಾಣವಾಗಿದ್ದು, 12 ಪೀಠಗಳ ಮೇಲೆ ಸ್ಥಾಪಿಸಲಾಗಿದೆ ಇದು ಜನಾಂಗಕ್ಕೆ ನೀಡಿದಂತಹ ಕೂಡುಗೆಯಾಗಿದೆ ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಎಂ ರಾಜೇಂದ್ರಕುಮಾರ್ ಮಾತನಾಡಿ, ಭರತ ಖಂಡದಲ್ಲಿ ಮಹಾಭಾರತ ಮತ್ತು ರಾಮಯಾಣ ಎಂಬ ಎರಡು ಮಹಾಕಾವ್ಯಗಳಿದ್ದು, ರಾಮಾಯಣದ ಪಾತ್ರಗಳು ಪ್ರತೀ ಹಳ್ಳಿಗಳಲ್ಲೂ ನಾವು ನೋಡಬಹುದಾಗಿದೆ. ಇಂತಹ ಮಹಾನ್ ಕಾವ್ಯವನ್ನು ಕೂಟ್ಟ ಮಹಾನ್ ಪುರಷರ ಜಯಂತಿಯನ್ನ ಆಚರಿಸುತ್ತಿರುವುದು ನಮ್ಮ ನಿಮ್ಮಲೆರ ಸೌಭಾಗ್ಯ ಎಂದು ಅಭಿಪ್ರಾಯಪಟ್ಟರು.
ಈ ವೇಳೆ ಸಿ.ಎಂ ರಾಜೇಂದ್ರಕುಮಾರ ಫೌಂಡೇಶನ್ ವತಿಯಿಂದ 56 ಮಹಿಳಾ ಸಂಘಗಳಿಗೆ ಹೋಲಿಗೆಯಂತ್ರ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಣೆ ಮತ್ತು ಪ್ರೋತ್ಸಾಹ ಧನವನ್ನನೀಡಿಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ವಿಧಾನಪರಿಷತ್ ಸದಸ್ಯ ಸಿದ್ದರಾಜು, ಮಾಜಿ ಶಾಸಕ ನಂಜುಂಡಸ್ವಾಮಿ, ಪರಿಮಳನಾಗಪ್ಪ, ಬಿಜೆಪಿ ಉಸ್ತುವಾರಿಯಾದ ರಘುಕೌಟಿಲ್ಯ, ಮಾನಸ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ದತ್ತೇಶ್, ಮುಖಂಡರಾದ ಮಂಜುನಾಥ್, ಜಯಸುಂದರ್ ಇನ್ನಿತರರು ಹಾಜರಿದ್ದರು.