ಮದ್ದೂರು: ಮನೆ ಬಾಗಿಲು ಮುರಿದು ಚಿನ್ನಾಭರಣ ಕಳವು
Update: 2017-11-29 21:52 IST
ಮದ್ದೂರು, ನ.29: ದುಷ್ಕರ್ಮಿಗಳು ಮನೆಯೊಂದರ ಬಾಗಿಲು ಮುರಿದು ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ತಾಲೂಕಿನ ಕೆಸ್ತೂರು ಪೊಲೀಸ್ ಠಾಣಾ ವ್ಯಾಪಿಯ ಕಂಪಲಾಪುರ ಗ್ರಾಮದಲ್ಲಿ ಜರಗಿದೆ.
ಗ್ರಾಮದ ಕುಳ್ಳೇಗೌಡ ಎಂಬವರ ಮನೆಯ ಬಾಗಿಲು ಮುರಿದು ಒಳಪ್ರವೇಶಿಸಿರುವ ದುಷ್ಕರ್ಮಿಗಳು ಸುಮಾರು 2 ಲಕ್ಷ ರೂ. ಮೌಲ್ಯದ 60 ಗ್ರಾಂ ಮೌಲ್ಯದ ಚಿನ್ನದ ಸರ ಹಾಗು ಕಿವಿಯ ಓಲೆ, ಝುಮುಕಿ ಕಳವು ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಕುಳ್ಳೇಗೌಡ ಹಾಗೂ ಈತನ ಪತ್ನಿ ಎಂದಿನಂತೆ ಮನೆಯ ಬೀಗ ಹಾಕಿ ತಮ್ಮ ಜಮೀನಿಗೆ ಕೃಷಿ ಚಟುವಟಿಕೆಗೆ ತೆರಳಿದ್ದ ವೇಳೆ ಈ ನಡೆದಿದ್ದು, ಕೆಸ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.