×
Ad

ಮೈಸೂರು ವಿವಿಯಲ್ಲಿ ಅಪ್ಪಚ್ಚ ಕವಿ ಅಧ್ಯಯನ ಪೀಠ ಸ್ಥಾಪಿಸಲು ಆಗ್ರಹ

Update: 2017-11-29 23:06 IST

ಮಡಿಕೇರಿ, ನ.29: ಕೊಡಗಿನ ಹೆಸರಾಂತ ಶತಮಾನದ ಸಂತಕವಿ ಹರದಾಸ ಅಪ್ಪಚ್ಚಕವಿ ಕುರಿತು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಪೀಠ ಸ್ಥಾಪನೆ ಮಾಡಬೇಕು ಎಂದು ಅಖಿಲ ಕೊಡವ ಸಮಾಜದ ಕಾರ್ಯಾಧ್ಯಕ್ಷ ಪ್ರೊ. ಇಟ್ಟಿರ ಕೆ.ಬಿದ್ದಪ್ಪಸರಕಾರವನ್ನು ಆಗ್ರಹಿಸಿದ್ದಾರೆ.

ಅಖಿಲ ಕೊಡವ ಸಮಾಜ ಮತ್ತು ಕುಶಾಲನಗರ ಕೊಡವ ಸಮಾಜದ ಸಂಯುಕ್ತಾಶ್ರಯದಲ್ಲಿ ಬುಧವಾರ ಕುಶಾಲನಗರ ಕೊಡವ ಸಮಾಜ ಸಭಾಂಗಣದಲ್ಲಿ ಏರ್ಪಡಿಸಿದ್ದ ಹರಿದಾಸ ಅಪ್ಪಚ್ಚಕವಿ ಅವರ 150ನೆ ಜನ್ಮ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕನ್ನಡ ಸಾಹಿತ್ಯದ ಮೇರುಕವಿಗಳ ಸಮಕಾಲೀನರು ಸುಮಾರು 118 ವರ್ಷಗಳ ಕೊಡವ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳಿಗೆ ಸಂಬಂಧಪಟ್ಟ ವಿಷಯಗಳನ್ನು ಕನ್ನಡ ಭಾಷೆಗೆ ಸಮಾನವಾಗಿ ಸಾಹಿತ್ಯದ ಮೂಲಕ ಕೊಡವ ಭಾಷೆಗೆ ಮನ್ನಣೆ ದೊರಕಿಸಿಕೊಟ್ಟವರು ಹರದಾಸ ಅಪ್ಪಚ್ಚು ಕವಿ ಎಂದು ಬಣ್ಣಿಸಿದರು.

ಅಪ್ಪಚ್ಚ ಕವಿ ಜನ್ಮ ದಿನಾಚರಣಾ ಸಮಿತಿ ಸಂಚಾಲಕ ಅಡ್ಡಂಡ ಕಾರ್ಯಪ್ಪಮಾತನಾಡಿ, ಅಪ್ಪಚ್ಚ ಕವಿಯ ಹೆಸರನ್ನು ಮಡಿಕೇರಿಯ ಜಿಲ್ಲಾ ಕೇಂದ್ರ ಗ್ರಂಥಾಲಯಕ್ಕೆ ನಾಮಕರಣ ಮಾಡಬೇಕು. ಅಲ್ಲದೆ, ನಾಪೊಕ್ಲು ಪ್ರಥಮ ದರ್ಜೆ ಕಾಲೇಜಿಗೆ ಅಪ್ಪಚ್ಚ ಕವಿ ಹೆಸರ್ನು ನಾಮಕರಣ ಮಾಡಬೇಕು ಎಂದು ಹೇಳಿದರು.

ಈ ವೇಳೆ ವೀರಾಜಪೇಟೆ ಕಾವೇರಿ ಕಾಲೇಜಿನ ಉಪನ್ಯಾಸಕಿ ಮುಲ್ಲೇಂಗಡ ರೇವತಿ ಪೂವಯ್ಯ ಮಾತನಾಡಿದರು.

ಅಖಲ ಕೊಡವ ಸಮಾಜದ ಉಪಾಧ್ಯಕ್ಷ ಅಜ್ಜಿಕುಟ್ಟಿರ ಸುಬ್ರಮಣಿ ಮಾದಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ಕುಶಾಲನಗರ ಕೊಡವ ಸಮಾಜದ ಅಧ್ಯಕ್ಷ ಮಂಡೇಪಂಡ ಬೋಸ್ ಮೊಣ್ಣಪ್ಪ ಅಧ್ಯಕ್ಷತೆ ವಹಿಸಿದ್ದರು.ರಂಗಭೂಮಿ ಕಲಾವಿದ ಮದ್ರಿರ ಸಂಜು ಬೆಳ್ಳಿಯಪ್ಪ, ಮಡಿಕೇರಿಯ ಕೊಡವ ಸಂಸ್ಕೃತಿ ಚಿಂತಕ ಬೊಟ್ಟೋಳಂಡ ಕಾಶಿ ಅಚ್ಚಯ್ಯ, ಕುಶಾಲನಗರದ ಕೊಡಗು ಹೆಗ್ಗಡೆ ಸಮಾಜದ ಅಧ್ಯಕ್ಷ ಪಟ್ಟಂಡ ಗಣೇಶ್, ಅಖಿಲ ಕೊಡವ ಸಮಾಜದ ಕಾರ್ಯದರ್ಶಿ ಅಮ್ಮಣಿಚಂಡ ರಾಜನಂಜಪ್ಪಉಪಸ್ಥಿತರಿದ್ದರು.

ಕೊಡವ ಸಮಾಜದ ಕಾರ್ಯದರ್ಶಿ ಪುಲಿಯಂಡ ಚಂಗಪ್ಪ ಸ್ವಾಗತಿಸಿದರು. ಧರಣಿ ಸೋಮಣ್ಣ ತಂಡದವರು ಪ್ರಾರ್ಥಿಸಿದರು. ಮುಕ್ಕಟೀರ ವಸಂತ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News