×
Ad

ಮಹಾದಾಯಿ ಹೋರಾಟಗಾರರಿಗೆ ಸಮನ್ಸ್

Update: 2017-11-29 23:17 IST

ಗದಗ, ನ.29: ಬಂಡಾಯದ ನೆಲದಲ್ಲಿ ಕಳಸಾ ಕಿಚ್ಚು ಮೊಳಗಿ ಎರಡು ವರ್ಷದ ಬಳಿಕ ನರಗುಂದ ಜೆಎಂಎಫ್‌ಸಿ ನ್ಯಾಯಾಲಯವು ನರಗುಂದ ತಾಲೂಕಿನ 50ಕ್ಕೂ ಹೆಚ್ಚು ರೈತರಿಗೆ ಬುಧವಾರ ಸಮನ್ಸ್ ಜಾರಿಗೊಳಿಸಿದೆ.

ಮಹಾದಾಯಿ, ಕಳಸಾ-ಬಂಡೂರಿ ಹೋರಾಟದಲ್ಲಿ ಭಾಗವಹಿಸಿದ್ದ ನರಗುಂದ, ಜಗಾಪೂರ, ಚಿಕ್ಕನರಗುಂದ, ಹದ್ಲಿ, ಭೈರನಹಟ್ಟಿ, ಮದಗುಣಕಿ ಸೇರಿದಂತೆ ಹಲವು ಗ್ರಾಮಗಳ ರೈತರ ಮೇಲೆ ಸೆಕ್ಷನ್ 143, 147, 148, 427, 504ರ ಅಡಿಯಲ್ಲಿ ಪ್ರಕರಣ ದಾಖಲಿಸಿ, ನವೆಂಬರ್ 30ರಂದು ನರಗುಂದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್‌ನಲ್ಲಿ ಆದೇಶಿಸಲಾಗಿದೆ.

ಮಹದಾಯಿ, ಕಳಸಾ-ಬಂಡೂರಿ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವುದಾಗಿ ಸರಕಾರ ಭರವಸೆ ನೀಡಿತ್ತು. ಆದರೆ, ಘಟನೆ ನಡೆದು ಎರಡು ವರ್ಷ ಕಳೆದರೂ ಸರಕಾರ ಪ್ರಕರಣಗಳನ್ನು ವಾಪಾಸ್ ಪಡೆದಿಲ್ಲ. ಇದು ಸರಕಾರದ ನಿರ್ಲಕ್ಷ ಎಂದು ಆರೋಪಿಸಿರುವ ಹೋರಾಟಗಾರರು, ಪ್ರಕರಣ ಹಿಂಪಡೆಯದಿದ್ದಲ್ಲಿ ಎರಡು ದಿನಗಳ ಬಳಿಕ ಗದಗ ಜಿಲ್ಲಾಧಿಕಾರಿಯವರ ಕಚೇರಿ ಎದುರು ಧರಣಿ ನಡೆಸುವುದಾಗಿ ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News