ಪಾರ್ಕ್ ನಲ್ಲಿ ಕುಳಿತಿದ್ದ ವ್ಯಕ್ತಿ ಹೃದಯಾಘಾತದಿಂದ ಮೃತ್ಯು
Update: 2017-11-30 20:33 IST
ಮೈಸೂರು, ನ.30: ಅಕ್ಷಯ ಭಂಡಾರದ ಬಳಿ ಇರುವ ಪಾರ್ಕ್ ನಲ್ಲಿ ಕುಳಿತಿದ್ದ ವ್ಯಕ್ತಿಯೋರ್ವವರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ.
ಮೃತರನ್ನು ಹೊಟೇಲ್ ಸಪ್ಲೈಯರ್ ರಾಜು(50)ಎಂದು ಹೇಳಲಾಗಿದ್ದು, ಗುರುವಾರ ಪಾರ್ಕ್ ನಲ್ಲಿ ಕುಳಿತಾಗ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆ..
ಸರಸ್ವತಿಪುರಂ ಗ್ಯಾರೇಜ್ ನಲ್ಲಿ ಈತ ಮಲಗುತ್ತಿದ್ದು, ಈತ ಅನಾಥನಾಗಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.