ಕಾರು ಪಲ್ಟಿ: ಮಹಿಳೆ ಮರತ್ಯು; ನಾಲ್ಕು ಮಂದಿ ಗಾಯ
Update: 2017-11-30 21:57 IST
ಮಂಡ್ಯ, ನ.30: ಕಾರೊಂದು ಪಲ್ಟಿಯಾದ ಪರಿಣಾಮ ಮಹಿಳೆ ಮರತಪಟ್ಟು, ನಾಲ್ಕು ಮಂದಿ ಗಾಯಗೊಂಡ ಘಟನೆ ಪಾಂಡವಪುರ ತಾಲೂಕು ಮೇಲುಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ಮೈಸೂರು ಬೀದರ್ ಹೆದ್ದಾರಿಯ ಬೆಳ್ಳಾಳೆ ಬಳಿ ಗುರುವಾರ ಬೆಳಗ್ಗೆ ನಡೆದಿದೆ.
ಮೈಸೂರಿನ ರಝೀನಾ ಶಾಂತಿ (49) ಮೃತಪಟ್ಟ ಮಹಿಳೆ ಗುರುತಿಸಲಾಗಿದ್ದು, ಕಾರಿನಲ್ಲಿದ್ದ ಚಾಲಕ ಸೈಯ್ಯದ್ ಷಪೀರ್, ರಿಯಾನ್ ಪಾಷ, ತೌಸೀಫ್ ಪಾಷ, ಮೊಹಮ್ಮದ್ ಮುಸ್ತಫಾ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರಿನಲ್ಲಿದ್ದವರು, ಕಾರ್ಯನಿಮಿತ್ತ ಬುಧವಾರ ನಾಗಮಂಗಲಕ್ಕೆ ತೆರಳಿ ಮತ್ತೆ ಮೈಸೂರಿಗೆ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.