×
Ad

ಬಸ್ ಬೆಂಕಿಗಾಹುತಿ: 20 ಮಂದಿ ಪಾರು

Update: 2017-11-30 22:05 IST

ಮದ್ದೂರು, ನ.30: ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಖಾಸಗಿ ಬಸ್ಸೊಂದು ಭಸ್ಮವಾಗಿದ್ದು, ಅದೃಷ್ಟವಶಾತ್ ಬಸ್ ನಲ್ಲಿದ್ದ ಕಾರ್ಖಾನೆಯೊಂದರ 20 ಮಂದಿ ಅಧಿಕಾರಿ, ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬುಧವಾರ ತಡರಾತ್ರಿ ಬಿಡದಿಯ ಕಾರ್ಖಾನೆಯ ಅಧಿಕಾರಿ, ಸಿಬ್ಬಂದಿಯನ್ನು ಕೂರಿಸಿಕೊಂಡು ಹೊರಟ ಬಸ್ ಮದ್ದೂರಿನ ಕೊಲ್ಲಿ ಸರ್ಕಲ್ ತಲುಪಿದಾಗ ಇಂಜಿನ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಎಚ್ಚೆತ್ತ ಚಾಲಕ ತಕ್ಷಣ ಬಸ್‍ನಲ್ಲಿದ್ದವರೆಲ್ಲರನ್ನು ಇಳಿಸಿ ತಾನೂ ಇಳಿದುಕೊಂಡಿದ್ದಾರೆ. ಹಿಂದೆಯೇ ಬೆಂಕಿ ಆವರಿಸಿಕೊಂಡು ಬಸ್ ಬಹುತೇಕ ಭಸ್ಮವಾಗಿದೆ ಎನ್ನಲಾಗಿದೆ.

ಸುದ್ದಿ ತಿಳಿದು ಅಗ್ನಿಶಾಮಕ ದಳದವರು ಸ್ಥಳಕ್ಕೆ ಭೇಟಿ ನೀಡಿ ಬೆಂಕಿಯನ್ನು ನಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News