ಹನೂರು: ಕನ್ನಡ ನಿತ್ಯೋತ್ಸವ ಸಮಾರೋಪ ಸಮಾರಂಭ
ಹನೂರು, ನ.30: ವಿಶ್ವ ಸಾಹಿತ್ಯಕ್ಕೆ ಒಂದು ದೂಡ್ಡ ಕೂಡುಗೆನ್ನಾಗಿ ಕೂಟ್ಟಂತಹ ಸಾಹಿತ್ಯವೇ ಕನ್ನಡ ಸಾಹಿತ್ಯ ಎಂದು ಕನ್ನಡ ಭಾಷಾ ವಿದ್ವಾಂಸರಾದ ಎಚ್ ಶಿವಣ್ಣರವರು ಅಭಿಪ್ರಾಯಪಟ್ಟಿದ್ದಾರೆ.
ಪಟ್ಟಣದ ಶ್ರೀ ವಿವೇಕಾನಂದ ಶಾಲೆಯಲ್ಲಿ ಆಯೋಜಿಸಿದ್ದ ಕನ್ನಡ ನಿತ್ಯೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡನಾಡಿನಲ್ಲಿ ನಾವೆಲ್ಲ ಹುಟ್ಟಿರುವುದೇ ಒಂದು ಶ್ರೇಷ್ಠ. ಏಕೆಂದರೆ ಕನ್ನಡನಾಡು ಪ್ರಾಕೃತಿಕ, ಸಾಂಸ್ಕೃತಿಕ, ಐತಿಯಾಸಿಕವಾಗಿ ಸಾಹಿತ್ಯದೊಂದಿಗೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅತ್ಯಂತ ಅಭಿವೃದ್ಧಿಯನ್ನು ಹೂಂದಿದಂತಹ ನಾಡು ಇದಾಗಿದೆ ಎಂದರು.
ಹನೂರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀನಿವಾಸ್ ನಾಯ್ಡು ಮಾತನಾಡಿ, ವಿದ್ಯಾರ್ಥಿ ದಿಸೆಯಿಂದಲೇ ಕನ್ನಡ ತನ ಮತ್ತು ಭಾಷಾ ಅಭಿಮಾನವನ್ನು ಬೆಳಸಿಕೂಳ್ಳಬೇಕು ಎಂದು ಕರೆ ನೀಡಿದರು.
ಈ ವೇಳೆ ಕಳೆದ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಮತ್ತು ಕನ್ನಡ ನಿತ್ಯೋತ್ಸವ ಪ್ರಯುಕ್ತ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಗುರುಸ್ವಾಮಿ, ಈರೇಂದ್ರ, ಯುವಕವಿಗಳಾದ ಗುರುಸ್ವಾಮಿ, ವಿವೇಕನಂದ, ಶಾಲೆಯ ಪ್ರಾಶುಂಪಾಲ ಮಧುಸೂದನ್, ಕಸಾಪ ಸದಸ್ಯರಾದ ಕೃಷ್ಣ ,ಮಾದೇಶ್ ಇನ್ನಿತರರು ಹಾಜರಿದ್ದರು.