×
Ad

ರಾಜ್ಯ ಸರಕಾರ ಭ್ರಷ್ಟಾಚಾರ ರಹಿತವಾದುದು: ಸಿಎಂ ಸಿದ್ದರಾಮಯ್ಯ

Update: 2017-11-30 23:41 IST

ಚಿಕ್ಕಮಗಳೂರು, ನ.30: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಜನರ ಸಮಸ್ಯೆಗಳನ್ನು ಬಗೆಹರಿಸಲು ಮುಂಚೂಣಿಯಲ್ಲಿದೆ. ಯಾವುದೇ ಹಗರಣ ಇಲ್ಲದ ಭ್ರಷ್ಟಾಚಾರ ರಹಿತ ಸರಕಾರವನ್ನು ಕೊಟ್ಟಿದ್ದೇವೆ. ಕಳೆದ ಚುನಾವಣೆಯಲ್ಲಿ ನುಡಿದಂತೆ ನಡೆದಿರುವ ತೃಪ್ತಿ ತನಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನರಸಿಂಹರಾಜಪುರ ತಾಲೂಕು ಕೇಂದ್ರದಲ್ಲಿ ನರಸಿಂಹರಾಜಪುರ-ಹಂದೂರು ಸಂಪರ್ಕ ಕಲ್ಪಿಸುವ ಭದ್ರಾ ಹಿನ್ನೀರಿನ ಸೇತುವೆಗೆ ಶಂಕುಸ್ಥಾಪನೆ ಸಹಿತ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಕಾರ್ಯ ನೆರವೇರಿಸಿ ಮಾತನಾಡಿದರು.

ಬಹಳ ವರ್ಷಗಳ ಬೇಡಿಕೆಯಾದ ಅತ್ಯಂತ ಅಗತ್ಯವಾಗಿ ಬೇಕಾದ ನರಸಿಂಹರಾಜಪುರದಿಂದ ಹಂದೂರು ಸಂಪರ್ಕಿಸುವ ಸೇತುವೆಯನ್ನು ಉದ್ಘ್ಘಾಟಿಸಿದ್ದು ಸಂತಸ ತಂದಿದೆ. 20 ಕಿ.ಮೀ. ಸುತ್ತಿ ಬಳಸಿ ಹೋಗುವ ಹಳ್ಳಿಗಳ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸ್ಥಳೀಯ ಮುಖಂಡರಾದ ಶ್ರೀನಿವಾಸ್‌ಜನಪರವಾಗಿ ಇಟ್ಟ ಬೇಡಿಕೆಯನ್ನು ಈಡೇರಿಸಿ ಸೇತುವೆಗೆ ಶಂಕುಸ್ಥಾಪನೆ ವಾಡಲಾಗಿದೆ. ಇದು ಮೀನುಗಾರಿಕೆ ಸಹಿತ ವಿವಿಧ ವಿಷಯಗಳಿಗೆ ಅನುಕೂಲದ ದೃಷ್ಟಿಯಿಂದ ಮಂಜೂರು ಮಾಡಲಾಗಿದೆ ಎಂದರು.

ಪಿಡಬ್ಲ್ಯುಡಿಯಲ್ಲಿ ಅಭಿವೃದ್ಧಿ ಸಾಕಷ್ಟು ಕೆಲಸಗಳನ್ನು ಮಾಡಿದ್ದೇವೆ. ರಸ್ತೆ, ಸೇತುವೆಗೆ ಹೆಚ್ಚಿನ ಅನುದಾನ ನೀಡಿದ್ದೇವೆ. ಅನ್ನಭಾಗ್ಯ ಕಾರ್ಯಕ್ರಮ. ಕೆಲವರ ಟೀಕೆ ಬಂದಿದೆ. ಕೂಲಿ ಮಾಡುವವರನ್ನು, ಬಡವರನ್ನು ಸೋಮಾರಿ ಮಾಡುತ್ತಿರುವುದಾಗಿ ಆರೋಪ. ಕೇಂದ್ರ ಸರಕಾರದ ಅಕ್ಕಿ ಎಂದು ಕೆಲೆವೆಡೆ ಹೇಳುತ್ತಿದ್ದಾರೆ. ಯುಪಿಎ ಸರಕಾರದ ಅವಧಿಯಲ್ಲಿ ಆಹಾರ ಭದ್ರತಾ ಕಾಯ್ದೆ ಜಾರಿಗೆ ಬಂದಿದೆ. ಮಾಹಿತಿ ಹಕ್ಕು, ಆಹಾರ ಭದ್ರತಾ ಕಾಯ್ದೆ ಸಹಿತ ವಿವಿಧ ಬಡವರಿಗೆ ಉಚಿತವಾಗಿ 7 ಕೆ.ಜಿ.ಅಕ್ಕಿ ದೇಶದ ಯಾವ ಸರಕಾರವು ಕೊಡುತ್ತಿಲ್ಲ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶೃಂಗೇರಿ ಕ್ಷೇತ್ರದ ಶಾಸಕ ಡಿ.ಎನ್. ಜೀವ್‌ರಾಜ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಲೊಕೊಪಯೋಗಿ ಸಚಿವ ಮಹದೇವಪ್ಪ, ಉಸ್ತುವರಿ ಸಚಿವ ರೋಷನ್ ಬೇಗ್, ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ, ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಆರತಿಕೃಷ್ಣ, ಎ.ಎನ್. ಮಹೇಶ್, ಎಂಎಲ್ಸಿ ಡಾ. ಮೋಟಮ್ಮ, ಜಿಪಂ ಅಧ್ಯಕ್ಷೆ ಚೈತ್ರಾಶ್ರೀ, ಜಿಪಂ ಉಪಾಧ್ಯಕ್ಷ ರಾಮಸ್ವಾಮಿ ಶೆಟ್ಟಿಗದ್ದೆ ಮತ್ತಿತರರು ಉಪಸ್ಥಿತರಿದ್ದರು.

ಮಾತೃಪೂರ್ಣ ಯೋಜನೆಯಲ್ಲಿ 9.50 ಲಕ್ಷ ಮಹಿಳೆಯರಿಗೆ ಮದ್ಯಾಹ್ನ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಶೃಂಗೇರಿ ಕ್ಷೇತ್ರ ವ್ಯಾಪ್ತಿಯಲ್ಲಿ 12 ಸಾವಿರಕ್ಕೂ ಹೆಚ್ಚು ಬಾಣಂತಿಯರು ಮತ್ತು ಗರ್ಭಿಣಿಯರಿಗೆ ಮಧ್ಯಾಹ್ನ ಆಹಾರ ನೀಡಲಾಗುತ್ತಿದೆ. ರೈತರಿಗೆ 3 ಲಕ್ಷದವರೆಗೆ ಬಡ್ಡಿ ರಹಿತ ಹಾಗೂ 10 ಲಕ್ಷದವರೆಗೆ ಶೇ.3ರಷ್ಟು ಬಡ್ಡಿಯಲ್ಲಿ ಸಾಲ ನೀಡಲಾಗುತ್ತಿದೆ. 22,27,500 ಕುಟುಂಬಗಳಿಗೆ 8165 ಸಾವಿರ ಕೋಟಿ ಸಾಲ ಮನ್ನಾ ಮಾಡಲಾಗಿದೆ.

-ಸಿದ್ದರಾಮಯ್ಯ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News