ಶಿರಸಿ: ಡಿ.3ಕ್ಕೆ' ಗ್ರಾಮೀಣ ಕ್ರೀಡಾಕೂಟ'

Update: 2017-12-01 11:51 GMT

ಶಿರಸಿ, ಡಿ.1: ಇಲ್ಲಿನ ಅಜ್ಜೀಬಳದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅನಂತಮೂರ್ತಿ ಗೆಳೆಯರ ಬಳಗ, ಸುಭದ್ರ ಫೌಂಡೇಶನ್ ಶಿರಸಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಡಿ.3ರಂದು ಬೆಳಗ್ಗೆ 10.30ಕ್ಕೆ ಗ್ರಾಮೀಣ ಕ್ರೀಡಾಕೂಟ ಆಯೋಜಿಸಲಾಗಿದೆ.

ಕ್ರೀಡಾಕೂಟದಲ್ಲಿ ಗೋಣಿಚೀಲದ ಓಟ, ಸಂಗೀತ ಖುರ್ಚಿ (ಮಹಿಳೆಯರಿಗೆ), ಹಗ್ಗ ಜಗ್ಗಾಟ (ಮಹಿಳೆ-ಪುರುಷ), ಲಿಂಬು ಮತ್ತು ಚಮಚ ಓಟ, ಹಣೆಯಲ್ಲಿ ನಾಣ್ಯ ಎತ್ತುವ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಆಸಕ್ತರು ಅನಂತಮೂರ್ತಿ (8277748938), ವಸಂತ ನೇಗಾರ (9986769099) ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News