ಸರಕಾರದ ಯೋಜನೆಗಳು ಜನಸಾಮಾನ್ಯರಿಗೆ ತಲುಪಿಸಲು ಪ್ರಯತ್ನಿಸಬೇಕು: ಚನ್ನಬಸವ ಜೇಕಿನ್
ಗಂಗಾವತಿ, ಡಿ.1: ಕನ್ನಡದ ನೆಲ-ಜಲ-ಭಾಷೆಗಳ ಜಾಗೃತಿಗೆ ಕೆಲಸ ನಿರ್ವಹಿಸುತ್ತಿರುವ ಕನ್ನಡಪರ ಸಂಘಟನೆಗಳು ಸರ್ಕಾರದ ಯೋಜ ನೆಗಳು ಜನಸಾಮಾನ್ಯರಿಗೆ ತಲುಪುವಂತೆ ಮಾಡಬೇಕೆಂದು ಕನ್ನಡಸೇನೆಯ ಜಿಲ್ಲಾಧ್ಯಕ್ಷ ಚನ್ನಬಸವ ಜೇಕಿನ್ ಕಾರ್ಯ ಕರ್ತರಿಗೆ ಕರೆ ನೀಡಿದ್ದಾರೆ.
ಕರ್ನಾಟಕ ರಾಜ್ಯೋತ್ಸವದ ನಿಮಿತ್ಯ ಕನ್ನಡಸೇನೆ ಸಂಘಟನೆಯ ಜೀರಾಳ ಗ್ರಾಮ ಘಟಕದಿಂದ ಜೀರಾಳ ಗ್ರಾಮದಲ್ಲಿ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕಬಡ್ಡಿ ಪಂದ್ಯಾವಳಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪ್ರತಿಯೊಂದು ಗ್ರಾಮಗಳ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಗ್ರಾಮದ ಜನರು ಗೂಳೆ ಹೋಗುತ್ತಿರುವದನ್ನು ತಪ್ಪಿಸಲು ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮ ಪಂಚಾಯತ್ ವತಿಯಿಂದ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ನೀಡಬೇಕು ಹಾಗೂ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಸೇರಿದಂತೆ ವಿವಿಧ ಇಲಾಖೆ ಗಳಿಂದ ಹಲವು ರೀತಿಯ ಅನುದಾನ ಬಿಡುಗಡೆಯಾ ಗುತ್ತದೆ ಅದನ್ನು ಸದು ಪಯೋಗ ಪಡಿಸಿಕೊಳ್ಳಲು ಹಾಗೂ ಹೈದ್ರಾಬಾದ-ಕರ್ನಾಟಕ ಪ್ರದೇಶಾಭಿವೃದ್ಧಿ ಅನುದಾನವನ್ನು ಸದ್ಬ ಳಕೆ ಮಾಡಿಕೊಂಡು ಗ್ರಾಮ ಪಂಚಾಯತ್‍ನಿಂದ ಗ್ರಾಮಗಳ ಅಭಿವೃದ್ಧಿಗಾಗಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹೇರೂರು ಜಿಪಂ ಸದಸ್ಯ ಅಮರೇಶ ಗೋನಾಳ ರವರು ಸಮುದಾಯ ಅಭಿವೃದ್ಧಿ ಸೇರಿದಂತೆ ಮನೆ, ಶೌಚಾಲಯ, ಒಳಚರಂಡಿ ಮತ್ತು ರಸ್ತೆ ಅಭಿವೃದ್ಧಿ, ಮತ್ತಿತರ ಯೋಜನೆಗಳಿಗೆ ಸರ್ಕಾರ ಗ್ರಾ.ಪಂ ಅನುದಾನ ಬಿಡುಗಡೆ ಮಾಡುತ್ತಿದ್ದು, ಇವುಗಳನ್ನು ಜನತೆ ಸದ್ಭಳಕೆ ಮಾಡಿಕೊಳ್ಳಲು ಹಾಗೂ ಊರಿನ ಅಭಿವೃದ್ಧಿಗಾಗಿ, ಯುವಕರಿಗಾಗಿ ಮತ್ತು ಗ್ರಾಮದ ಯಾವುದೇ ಸಮಸ್ಯೆ ಗಳಿಗಾಗಿ ಕನ್ನಡ ಸೇನೆ ಸಂಘಟನೆಯು ಶ್ರಮಿಸುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಶಿವಾನಂದಯ್ಯಸ್ವಾಮಿ, ಸುಳೇಕಲ್, ಅಧ್ಯಕ್ಷತೆಯನ್ನು ನಾಗರಾಜ ಎಸ್. ತಂಗಡಗಿ ಸಾನಿಧ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾ.ಪಂ ಅಧ್ಯಕ್ಷ ವಿರು ಪಾಕ್ಷಗೌಡ ಮಾಲಿಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರೆಡ್ಡಿ ಶ್ರೀನಿವಾಸ, ನವಲಿ ಹೋಬಳಿ ಅಧ್ಯಕ್ಷ ಲಕ್ಷ್ಮಣ ಭಾವಿಕಟ್ಟಿ, ಪಿಎಸ್ ಐ ಶಾಂತಪ್ಪ ಬೆಲ್ಲದ್, ಗ್ರಾ.ಪಂ ಮಾಜಿ ಅಧ್ಯಕ್ಷರಾದ ಜಡಿ ಯಪ್ಪ ನವಲಿ, ಕನ್ನಡಸೇನೆಯ ಜಿಲ್ಲಾ ಉಪಾಧ್ಯಕ್ಷರಾದ ಆದಿಲ್‍ಪಾಷಾ ಮುಸ್ಟೂರು, ತಾಲೂಕ ಅಧ್ಯಕ್ಷರಾದ ಮಂಜುನಾಥ ಪತ್ತಾರ್, ಬಸವರಾಜ ಗುಡಿತಾಳ, ವೆಂಕನಗೌಡ ಪೊಲೀಸ್ ಪಾಟೀಲ್, ಗ್ರಾ.ಪಂ ಸದಸ್ಯರಾದ ಬಸವರಾಜ ಭೋವಿ, ದುರುಗಪ್ಪ ಕಂಪ್ಲಿ, ದುರುಗಮ್ಮ ಭೋವಿ, ಗ್ರಾ.ಪಂ ಮಾಜಿ ಅಧ್ಯಕ್ಷ ಶಂಕರಗೌಡ ಪೊ.ಪಾಟೀಲ್, ಎಸ್.ಡಿ. ಎಂ.ಸಿ ಸದಸ್ಯರಾದ ಶೇಖ್ ಮೊಹಮ್ಮದ್ ಹಾಗೂ ಕನ್ನಡಸೇನೆಯ ನೂರಾರು ಕಾರ್ಯಕರ್ತರು ಮತ್ತು ಊರಿನ ಪ್ರಮುಖರು, ಸಾರ್ವಜನಿಕರು ಭಾಗವಹಿಸಿದ್ದರು.