ಚಿಕ್ಕಮಗಳೂರು: ದತ್ತ ಜಯಂತಿಗೆ ಚಾಲನೆ
Update: 2017-12-01 23:24 IST
ಚಿಕ್ಕಮಗಳೂರು, ಡಿ.1: ಹಿಂದೂ-ಮುಸಲ್ಮಾನರ ಧಾರ್ಮಿಕ ಭಾವೈಕ್ಯತಾ ಕೇಂದ್ರವಾಗಿರುವ ಶ್ರೀಇನಾಂ ದತ್ತಾತ್ರೆಯ ಬಾಬಾಬುಡಾನ್ ಗಿರಿಯಲ್ಲಿ 3 ದಿನಗಳು ನಡೆಯುವ ದತ್ತಜಯಂತಿಯು ಡ್ರೋನ್ ಕಣ್ಗಾವಲು, ಬಿಗಿಭದ್ರತೆ ನಡುವೆ ಶುಕ್ರವಾರ ಚಾಲನೆ ದೊರೆಯಿತು.
ಅನುಸುಯಾ ಜಯಂತಿ ಪ್ರಯುಕ್ತ ಚಿಕ್ಕಮಗಳೂರು ನಗರದಲ್ಲಿ ಸಂಕೀರ್ತನಾ ಯಾತ್ರೆ ಕೈಗೊಂಡ ಸಹಸ್ರಾರು ಮಹಿಳೆಯರು ಬಾಬಾಬುಡಾನ್‌ಗಿರಿಗೆ ತೆರಳಿ ದತ್ತಪಾದುಕೆಯ ದರ್ಶನ ಪಡೆದರು.
ದತ್ತಜಯಂತಿ ಹಿನ್ನೆಲೆಯಲ್ಲಿ ಬಾಬಾಬುಡಾನ್‌ಗಿರಿಯಲ್ಲಿ ಡ್ರೋಣ್ ಕಣ್ಗಾವಲು, ಸಿಸಿಟಿವಿ ಜೊತೆಗೆ ಬಿಗಿಪೋಲಿಸ್ ದ್ರತೆಯನ್ನು ಒದಗಿಸಲಾಗಿದೆ. ಡಿ.2ರಂದು ನಗರದಲ್ಲಿ ಬೃಹತ್ ಶೋಬಾಯಾತ್ರೆ ನಡೆಯಲಿದ್ದು, ಡಿ.3ರಂದು ಗಿರಿಯಲ್ಲಿ ಹೋಮ ಹವನ ನಡೆಸುವುದರೊಂದಿಗೆ ದತ್ತಜಯಂತಿ ಉತ್ಸವ ಸಮಾಪ್ತಿಯಾಗಲಿದೆ.