ರಸ್ತೆ ಅಪಘಾತ : ಓರ್ವ ಮೃತ್ಯು
ಕೊಳ್ಳೇಗಾಲ,ಡಿ.2: ಟಿಪ್ಪರ್ ಮತ್ತು ಬೈಕ್ ನಡುವೆ ಮುಖಾಮುಖಿ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಧಳದಲ್ಲೇ ಮೃತಪಟ್ಟಿರುವ ಘಟನೆ ಶುಕ್ರವಾರ ಸಂಜೆ ಚಿಲಕವಾಡಿ ಬೆಟ್ಟದ ಬಳಿ ನಡೆದಿದೆ.
ಇಲ್ಲಿನ ಸಮೀಪದ ಕುಂತೂರು ಮೊಳೆ ಗ್ರಾಮದ ನಿವಾಸಿ ಪುಟ್ಟಮಾದಶೆಟ್ಟಿ ಎಂಬವರ ಮಗ ಕೃಷ್ಣ (26) ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಶುಕ್ರವಾರ ನಂಜನಗೂಡಿಗೆ ದೇವಸ್ಧಾನಕ್ಕೆ ವಿಶೇಷ ಪೂಜೆಗೆ ಬೈಕ್‍ನಲ್ಲಿ ತೆರಳುವಾಗ ತಾಲ್ಲೂಕಿನ ಚಿಲಕವಾಡಿ ಬೆಟ್ಟದ ಬಳಿ ಮಣ್ಣು ತುಂಬಿದ ಟಿಪ್ಪರ್ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಸ್ಧಳದಲ್ಲೇ ಮೃತಪಟ್ಟಿದ್ದಾರೆ.
ಈ ವಿಷಯ ತಿಳಿದ ಸರ್ಕಲ್ ಇನ್ಸ್‍ಪೆಕ್ಟರ್ ರಾಜಣ್ಣ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಯ ಸಬ್‍ಇನ್ಸ್ ಪೆಕ್ಟರ್ ವನರಾಜು ಮುಖ್ಯ ಪೇದೆಗಳಾದ ರಂಗರಾಜು, ಶಂಕರಮೂರ್ತಿ, ರವಿಕುಮಾರ್, ಪೊಲೀಸ್ ಸಿಬ್ಬಂದಿಗಳಾದ ಮಂಜಪ್ಪ ಸ್ಧಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ಈ ಘಟನೆ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಟಿಪ್ಪರ್ ಮತ್ತು ಬೈಕ್‍ಗಳನ್ನು ವಶಪಡಿಸಿಕೊಂಡು ಸರ್ಕಲ್ ಇನ್ಸ್ ಪೆಕ್ಟರ್ ರಾಜಣ್ಣ ಮುಂದಿನ ಕ್ರಮ ಕೈಗೊಂಡಿದ್ದಾರೆ.