×
Ad

ಚಿಕ್ಕಮಗಳೂರು: ದತ್ತಜಯಂತಿ ಅಂಗವಾಗಿ ನಗರದಲ್ಲಿ ಶೋಭಯಾತ್ರೆ

Update: 2017-12-02 19:09 IST

ಚಿಕ್ಕಮಗಳೂರು, ಡಿ.2: ದತ್ತಜಯಂತಿ ಅಂಗವಾಗಿ ದತ್ತ ಮಾಲಾಧಾರಿಗಳು ಶನಿವಾರ ಸಂಜೆ ಚಿಕ್ಕಮಗಳೂರು ನಗರದಲ್ಲಿ ಶೋಭಾಯಾತ್ರೆ ನಡೆಸಿದರು.
ಆರಂಭದಲ್ಲಿ ಕಾಮದೇನು ಗಣಪತಿ ದೇವಸ್ಥಾನದ ಆವರಣದಿಂದ ಹೊರಟ ಶೋಭಾಯಾತ್ರೆಯು ಕೆಇಬಿ ವೃತ್ತವನ್ನು ತಿರುಗಿ ಹನುಮಂತಪ್ಪ ವೃತ್ತದಲ್ಲಿ ಸಾಗಿ ಆಜಾದ್ ಪಾರ್ಕ್‍ವರೆಗೆ ನಡೆದು ಸಭೆ ನಡೆಸಿದರು.

ಈ ಸಮಯದಲ್ಲಿ ಪೊಲೀಸರು ವ್ಯಾಪಕ ಬಂದೋಬಸ್ತ್ ನಡೆಸಿದ್ದು, ಐಜಿ ರಸ್ತೆ, ಎಂ.ಜಿ.ರಸ್ತೆಯುದ್ದಕ್ಕೂ ಪೊಲೀಸ್ ಬ್ಯಾರೀಕೇಡ್‍ಗಳನ್ನು ಹಾಕಿ ವ್ಯವಸ್ಥಿತ ಸರ್ಪಗಾವಲು ಹಾಕಲಾಗಿತ್ತು. ಕೆಲವೆಡೆ ವಾಹನಗಳ ಸಂಚಾರಗಳಿಗೆ ತೀವ್ರ ಸಮಸ್ಯೆಯೂ ಎದುರಾಯಿತು. ನಗರದಲ್ಲಿ ಇಂದು ಹಲವೆಡೆ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಲಾಗಿತ್ತು.
ಶೋಭಯಾತ್ರೆಯಲ್ಲಿ ಬಿಜೆಪಿ, ಆರೆಸ್ಸೆಸ್, ವಿಎಚ್‍ಪಿ, ಬಜರಂಗದಳ ಸಹಿತ ಸಂಘಟಪರಿವಾರದ ವಿವಿಧ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು.

ಬಜರಂಗದಳದ ಸತ್ಯನಾರಾಯಣ, ಶಾಸಕ ಸಿ.ಟಿ.ರವಿ. ಡಿ.ಎನ್.ಜೀವರಾಜ್, ಸಂಸದೆ ಶೊಭಾಕರಂದ್ಲಾಜೆ, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಸಹಿತ ವಿವಿಧ ಮುಖಂಡರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News