×
Ad

ಚಿಕ್ಕಮಗಳೂರು : ಅಲ್ ಬದ್ರಿಯಾದಲ್ಲಿ ಮೀಲಾದುನ್ನೆಬಿ ಆಚರಣೆ

Update: 2017-12-02 21:04 IST

ಚಿಕ್ಕಮಗಳೂರು, ನ.29: ಅಲ್ ಬದ್ರಿಯಾ ಜುಮ್ಮಾ ಮಸ್ಜಿದ್ ಅಧಿನದಲ್ಲಿ ವಿಜೃಂಭಣೆಯಿಂದ ಮೀಲಾದುನ್ನೆಬಿ ಆಚರಿಸಲಾಯ್ತು. ಜಮಾಅತಿನ ಹಿರಿಯರಾದ ಅಬ್ದುಲ್ ಖಾದರ್ ಹಾಜಿ ದ್ವಜಾರೋಹಣ ಗೈದರು.

ಪ್ರವಾದಿ ಸಂದೇಶ ನೀಡಿ ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ಸದಸ್ಯ ಬದ್ರಿಯ್ಯಾ ಮಸೀದಿ ಖತೀಬ್ ಮೌಲಾನಾ ಹುಸೈನ್ ಸಅದಿ ಉಸ್ತಾದ್ ಮಾತನಾಡಿ, ಧರ್ಮ-ಜಾತಿಗಳೆಡೆಯಲ್ಲಿರುವ ಕಂದಕವನ್ನು ಕಡಿಮೆ ಮಾಡಿ, ಸಾಮಾಜಿಕ ಜೀವನದಲ್ಲಿ ಒಬ್ಬರನ್ನೊಬ್ಬರು ಪರಸ್ಪರ ಅರ್ಥಮಾಡಿಕೊಂಡು ಜೀವನ ನಡೆಸಬೇಕು ಎಂದು ಹೇಳಿದರು.

ಪ್ರವಾದಿ ಪೈಗಂಬರರ ಪ್ರೀತಿ, ಕ್ಷಮಿಸುವ ಸ್ವಭಾವ, ಮಾನವೀಯತೆಯ ಕಾರಣದಿಂದ ಮಾತ್ರ ಲಕ್ಷೋಪಲಕ್ಷ ಜನರು ಇಸ್ಲಾಂ ಸ್ವೀಕರಿಸದರೇ ವಿನಃ 'ಲವ್ ಜಿಹಾದ್' ಮುಂತಾದವುಗಳ ಅಗತ್ಯವೇ ಈ ವರೆಗೆ ಇಸ್ಲಾಮಿಗೆ ಬಂದಿಲ್ಲ, ಅವರ ಅದೇ ಚರ್ಯೆಯನ್ನು ಪಾಲಿಸಿದಲ್ಲಿ ಸ್ವಸ್ಥ ಜೀವನ ಸಾಧ್ಯ ಎಂದರು.

ಜಮಾಅತ್ ಕೋಶಾಧಿಕಾರಿ ಅಝೀಝ್ ಕರಾವಳಿ, ಸೆಕ್ರೆಟರಿ ಅಲ್ತಾಫುರ್ರಹ್ಮಾನ್, ಎಸ್ಸೆಸ್ಸೆಪ್ ಘಟಕಾಧ್ಯಕ್ಷ ಶಮೀಮ್ ಕರಾವಳಿ, ಉದ್ಯಮಿ ಬಿ.ಎಸ್. ಮುಹಮ್ಮದ್ ಮುಂತಾದವರ ಸಹಿತ ಸಾವಿರಾರು ಮಂದಿ ಪಾಲ್ಗೊಂಡಿದ್ದು ಯುವಕರ ಮತ್ತು ವಿದ್ಯಾರ್ಥಿಗಳ ತಂಡದಿಂದ ನಡೆದ ದಫ್ ಅತ್ಯಾಕರ್ಷಕವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News