ಲೈನ್‍ಮ್ಯಾನ್ ಮೃತ್ಯು: ವೈದ್ಯರ ನಿರ್ಲಕ್ಷ್ಯ ಎಂದು ಆರೋಪಿಸಿ ಪ್ರತಿಭಟನೆ
ಚಿಕ್ಕಮಗಳೂರು, ನ.29: ವಿದ್ಯುತ್ ಕಂಬದಿಂದ ಬಿದ್ದಿದ್ದ ಲೈನ್‍ಮ್ಯಾನ್ ಒಬ್ಬರಿಗೆ ಜಿಲ್ಲಾ ಆಸ್ಪತ್ರೆ ವೈದ್ಯರು ತಕ್ಷಣ ಚಿಕಿತ್ಸೆ ನೀಡದೇ ಸಾವಿಗಿಡಾದರು ಎಂದು ಆರೋಪಿಸಿ ಮೆಸ್ಕಾಂನ ಲೈನ್‍ಮ್ಯಾನ್ ಹಾಗೂ ಇತರ ಸಿಬ್ಬಂಧಿಯರು ಜಿಲ್ಲಾ ಆಸ್ಪತ್ರೆಯ ವೈದ್ಯರ ವಿರುದ್ಧ ಆಕ್ರೋಶಗೊಂಡು ಮುತ್ತಿಗೆ ಹಾಕಿದ ಪ್ರಕರಣ ಶನಿವಾರ ನಡೆಯಿತು.
ಇಲ್ಲಿನ ಮೆಸ್ಕಾಂ ಲೈನ್‍ಮ್ಯಾನ್ ರವಿಕುಮಾರ್ ಎಂಬವರು ಜೋಳ್‍ದಾಳ್ ಸಮೀಪ ವಿದ್ಯುತ್ ಕಂಬ ಹತ್ತಿ ಕೆಲಸ ಮಾಡುತ್ತಿದ್ದಾಗ ಬಿದ್ದು ತೀವ್ರ ಪೆಟ್ಟಾದ ಅವನನ್ನು ಜಿಲ್ಲಾ ಆಸ್ಪತ್ರೆ ಚಿಕಿತ್ಸೆಗೆ ತಂದಾಗ ವೈದ್ಯರು ತಕ್ಷಣ ಚಿಕಿತ್ಸೆ ನೀಡಲಿಲ್ಲ ಎಂದು ಹೇಳಲಾಗಿದೆ.
ವೈದ್ಯರು ಚಿಕಿತ್ಸೆ ನೀಡಲು ವಿಳಂಬ ಮಾಡಿದ ಹಿನ್ನಲೆಯಲ್ಲಿ ಗಾಯಾಳು ಲೈನ್‍ಮನ್ ಮೃತಪಟ್ಟಿದ್ದು ಇದರಿಂದ ಮೃತನ ಸಂಬಂಧಿಕರು ಸಹೋದ್ಯೋಗಿ ಸಿಬ್ಬಂದಿಗಳು ವೈದ್ಯರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ವೈದ್ಯರು ಚಿಕಿತ್ಸೆ ನೀಡಲು ವಿಳಂಬ ಮಾಡಿ ಸಾವಿಗೆ ಕಾರಣವಾಯಿತೆಂದು ಆರೋಪಿಸಿ ಮೆಸ್ಕಾಂನ ಲೈನ್‍ಮ್ಯಾನ್ ಸಿಬ್ಬಂದಿಗಳು ಜಿಲ್ಲಾ ಆಸ್ಪತ್ರೆಗೆ ಮುತ್ತಿಗೆ ಹಾಕಿ ನಿರ್ಲಕ್ಷ್ಯ ತೋರಿದ ಇಬ್ಬರು ವೈದ್ಯರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.