ನಾಗಮಂಗಲ : ಬೋನಿಗೆ ಬಿದ್ದ ಚಿರತೆ
ನಾಗಮಂಗಲ,ಡಿ.2 ಬಹಳ ದಿನಗಳಿಂದ ತಾಲೂಕಿನ ಸೂರನಹಳ್ಳಿ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದ ಚಿರತೆ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಶನಿವಾರ ಬೆಳಗ್ಗೆ ಬಿದ್ದಿದ್ದು, ಗ್ರಾಮಸ್ಥರು ನಿಟ್ಟುರಿಸು ಬಿಟ್ಟಿದ್ದಾರೆ.
ಬೆಳ್ಳೂರು ಹೋಬಳಿಯ ಕಬ್ಬಿನಕೆರೆ ದೊಡ್ಡಾಗಟ್ಟ, ಸೂರನಹಳ್ಳಿ ಗ್ರಾಮದ ಹಲವೆಡೆ ಚಿರತೆ ಕಾಣಿಸಿಕೊಂಡಿದ್ದರಿಂದ ಗ್ರಾಮಸ್ಥರು ಆತಂಕಗೊಂಡು ಅರಣ್ಯ ಇಲಾಖೆಗೆ ದೂರು ನೀಡಿ ಚಿರತೆ ಸೆರೆಯಿಡಿಯುವಂತೆ ಒತ್ತಾಯಿಸಿದ್ದರು.
ಅರಣ್ಯ ಇಲಾಖೆಯವರು ತಿಂಗಳ ಹಿಂದೆ ಕಬ್ಬಿನಕೆರೆಯಲ್ಲಿ ಬೋನು ಇಟ್ಟಿದ್ದು, ನಂತರದಲ್ಲಿ ದೊಡ್ಡಘಟ್ಟ ಗ್ರಾಮಕ್ಕೆ ಸ್ಥಳಾಂತರಿಸಿದ್ದರು. ಈ ಎರಡು ಗ್ರಾಮಗಳಲ್ಲೂ ಚಿರತೆ ಬೋನಿಗೆ ಬಿದ್ದಿರಲಿಲ್ಲ. ಆದರೆ, ಸೂರನಹಳ್ಳಿಯಲ್ಲಿ ಬಾರೆಯೊಂದರ ಬಳಿ ಇರಿಸಲಾಗಿದ್ದ ಬೋನಿಗೆ ಶನಿವಾರ ಬೆಳಗ್ಗೆ 11ರ ಸಮಯದಲ್ಲಿ ಚಿರತೆ ಬಿದ್ದಿದೆ.
ಗ್ರಾಮಸ್ಥರಿಂದ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿ ಚಿರತೆ ವಶಕ್ಕೆ ಪಡೆದ ಎಸಿಎಫ್ ಪ್ರಶಾಂತ್, ಆರ್‍ಎಫ್‍ಓ ಅನಂತರಾಮು ಮತ್ತು ಸಿಬ್ಬಂದಿ, ಬಂಡಿಪುರ ಅರಣ್ಯಕ್ಕೆ ಬಿಡುವುದಾಗಿ ತಿಳಿಸಿದರು. ಚಿರತೆ ನೋಡಲು ಸುತ್ತಮುತ್ತಲ ಗ್ರಾಮಸ್ಥರು ಮುಗಿಬಿದ್ದರು,