×
Ad

ರಾಜ್ಯ ಮಟ್ಟದ ಗಿಟಾರ್ : ದೀಕ್ಷಿತ್ ನೆಲ್ಲಿತ್ತಾಯಗೆ ದ್ವಿತೀಯ ಬಹುಮಾನ

Update: 2017-12-02 22:10 IST

ಮಡಿಕೇರಿ,ಡಿ.2 :ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ನೆಹರು ಯುವ ಕೇಂದ್ರದ ವತಿಯಿಂದ ಉಡುಪಿಯಲ್ಲಿ ನಡೆದ ರಾಜ್ಯಮಟ್ಟದ ಗಿಟಾರ್ ವಾದನ ಸ್ಪರ್ಧೆಯಲ್ಲಿ ಪೊನ್ನಂಪೇಟೆಯ ದೀಕ್ಷಿತ್ ನೆಲ್ಲಿತ್ತಾಯ ದ್ವಿತೀಯ ಬಹುಮಾನ ಗೆಲ್ಲುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಉಡುಪಿಯ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದ ಸಭಾಂಗಣದಲ್ಲಿ ಕಳೆದ ಮೂರು ದಿನಗಳಿಂದ ನಡೆದ ಸ್ಪರ್ಧೆಯಲ್ಲಿ ರಾಜ್ಯದ ಸುಮಾರು 22 ಸ್ಪರ್ಧಿಗಳು ಪಾಲ್ಗೊಂಡಿದ್ದರು. ಸಮಾರೋಪ ಸಮಾರಂಭದಲ್ಲಿ ಉಡುಪಿ ಜಿ.ಪಂ ಅಧ್ಯಕ್ಷರಾದ ಪ್ರಭಾಕರ್ ಅವರು ದೀಕ್ಷಿತ್ ನೆಲ್ಲಿತ್ತಾಯಗೆ ಬಹುಮಾನ ವಿತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News