ಬಾಬಾ ಬುಡಾನ್‌ಗಿರಿಯಲ್ಲಿ ಲಾಠಿ ಪ್ರಹಾರ
Update: 2017-12-03 13:30 IST
ಚಿಕ್ಕಮಗಳೂರು, ಡಿ.3: ಬಾಬಾ ಬುಡಾನ್‌ಗಿರಿಯಲ್ಲಿ ಬಾವುಟ ಹಾರಿಸುವ ವಿಚಾರದಲ್ಲಿ ನಡೆದ ಗದ್ದಲದ ಪರಿಸ್ಥಿತಿಯನ್ನು ಹತೋಟಿಗೆ ತರಲು ಲಘು ಲಾಠಿ ಪ್ರಹಾರ ನಡೆಸಿರುವ ಘಟನೆ ರವಿವಾರ ನಡೆದಿದೆ.
ನಿಷೇಧಿತ ಸ್ಥಳದಲ್ಲಿ ಭಗವಾಧ್ವಜ ಹಾರಿಸಲು ದತ್ತ ಮಾಲಾಧಾರಿಗಳ ತಂಡ ಯತ್ನಿಸಿತ್ತು. ಈ ಸಮಯದಲ್ಲಿ ಪೊಲೀಸರು ಮತ್ತು ದತ್ತಮಾಲಾಧಾರಿಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಸ್ಥಳದಲ್ಲಿ ಉದ್ನಿಗ್ನ ವಾತಾವರಣ ನೆಲೆಸಿದ್ದರಿಂದ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿ ಜನರನ್ನು ಚದುರಿಸಿದರು.
ಸ್ಥಳದಲ್ಲಿ ಚಿಕ್ಕಮಗಳೂರು ಎಸ್ಪಿಕೆ.ಅಣ್ನಾಮಲೈ ಮೊಕ್ಕಾ ಹೂಡಿದ್ದಾರೆ. ಸ್ಥಳದಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿದ್ದು, ಸುಮಾರು 2 ಸಾವಿರ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.