ಪೊಲೀಸ್ ಬ್ಯಾರಿಕೇಡ್ ಮೇಲೆ ಕಾರು ಹತ್ತಿಸಿದ ಸಂಸದ ಪ್ರತಾಪ್ ಸಿಂಹ

Update: 2017-12-03 10:05 GMT

ಮೈಸೂರು, ಡಿ.3: ಹನುಮ ಜಯಂತಿಯ   ಅಂಗವಾಗಿ ಮೆರವಣಿಗೆ ನಡೆಸಲು ಮುಂದಾಗಿದ್ದ ಸಂಸದ ಪ್ರತಾಪ್‌ ಸಿಂಹ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹುಣಸೂರು ತಾಲೂಕಿನ ಬಿಳಿಕೆರೆಯ ಬಳಿ ಪ್ರತಾಪ್ ಸಿಂಹ  ಅವರನ್ನು ವಶಕ್ಕೆ  ಪಡೆಯಲು ಪೊಲೀಸರು ತಯಾರಿ ನಡೆಸಿದ್ದರು ಎನ್ನಲಾಗಿದೆ. ಆದರೆ ಪೊಲೀಸರ ತಂತ್ರವನ್ನು ವಿಫಲಗೊಳಿಸಲು ಪ್ರತಾಪ್ ಸಿಂಹ ಅವರು ಅತ್ಯಂತ ವೇಗ ಹಾಗೂ ನಿರ್ಲಕ್ಷ್ಯದಿಂದ ಕಾರನ್ನು ಪೊಲೀಸ್ ಬ್ಯಾರಿ ಕೇಡ್ ಮೇಲೆ ಹತ್ತಿಸಿದರು ಎಂದು ತಿಳಿದು ಬಂದಿದೆ

ಪೊಲೀಸ್‌ ಕ್ರಮದ ಕುರಿತು  ಪೊಲೀಸ್‌ ವರಿಷ್ಠಾಧಿಕಾರಿ ರವಿ.ಡಿ.ಚೆನ್ನಣ್ಣನವರ್‌ ವಿರುದ್ಧ ಪ್ರತಾಪ್‌ ಸಿಂಹ  ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುಣಸೂರಿನಲ್ಲಿ ಲಘು ಲಾಠಿ ಪ್ರಹಾರ: ಹನುಮ ಜಯಂತಿ ಹಿನ್ನೆಲೆಯಲ್ಲಿ ಮಂಜುನಾಥ ದೇವಾಲಯದ ಬಳಿ ಸಂಸದ ಪ್ರತಾಪ ಸಿಂಹ ಆಗಮನಕ್ಕೆ ಆಗ್ರಹಿಸಿ ಧರಣಿ ನಡೆಸುತ್ತಿದ್ದ ಪ್ರತಿಭಟನೆಕಾರರು  ಪೊಲೀಸರ   ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ವರದಿಯಾಗಿದೆ.

 ಪ್ರತಿಭಟನೆಕಾರರನ್ನು ಚದುರಿಸಲು ಪೊಲೀಸರು ಲಘು  ಲಾಠಿ ಪ್ರಹಾರ ನಡೆಸುತ್ತಿದ್ದಂತೆ ಲಘು ಲಾಠಿ ಪ್ರಹಾರದಿಂದ  ತಪ್ಪಿಸಿಕೊಳ್ಳಲು ಪ್ರತಿಭಟನೆಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು ಎನ್ನಲಾಗಿದೆ.

ಈ ಸಂಬಂಧ ಹಲವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News