×
Ad

ಬಾಬಾ ಬುಡಾನ್‌ಗಿರಿ: ನಿಷೇಧಿತ ಸ್ಥಳಕ್ಕೆ ನುಗ್ಗಿ ದತ್ತ ಮಾಲಾಧಾರಿಗಳಿಂದ ದಾಂಧಲೆ

Update: 2017-12-03 15:53 IST

ಚಿಕ್ಕಮಗಳೂರು, ಡಿ.3: ಬಾಬಾಬುಡಾನ್‌ಯಲ್ಲಿ ಸಂಘ ಪರಿವಾರ ಆಚರಿಸುತ್ತಿರುವ ದತ್ತ ಜಯಂತಿಯ ಕೊನೆಯ ದಿನವಾದ ಇಂದು ಮಾಲಾಧಾರಿಗಳು ಪ್ರವೇಶ ನಿಷೇಧಿತ ಸ್ಥಳಕ್ಕೆ ನುಗ್ಗಿ ದಾಂಧಲೆ ನಡೆಸಿದ ಘಟನೆ ನಡೆದಿದೆ.

ದತ್ತ ಮಾಲಾಧಾರಿಗಳು ಸರತಿಯಲ್ಲಿ ಗುಹೆಯೊಳಗೆ ತೆರಳಿ ದತ ಪಾದುಕೆಯ ದರ್ಶನ ಪಡೆದು ಹಿಂದಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕೆಲವರು ಗುಹೆಯೊಳಗೆ ದತ್ತಪಾದುಕೆ ದರ್ಶನ ಪಡೆದು ಹಿಂದಿರುಗುವ ಸಮಯದಲ್ಲಿ ಕೆಲವರು ಪಕ್ಕದ ನಿಷೇಧಿತ ಸ್ಥಳದ ಸುತ್ತಮುತ್ತಲು ಹಾಕಿದ್ದ ಎತ್ತರದ ತಂತಿ ಬೇಲಿಯ ಮೇಲೇರಿ ಒಳಗೆ ನುಗ್ಗಿದ್ದಾರೆ. ಬಳಿಕ ಅಲ್ಲಿ ಭಗವಾಧ್ವಜ ನೆಟ್ಟು ದಾಂಧಲೆಗೆ ನಡೆಸಿದ್ದಾರೆ. ಈ ವೇಳೆ ಕೆಲವರು ಅಲ್ಲಿರುವ ಗೋರಿಯೊಂದಕ್ಕೆ ಹಾನಿ ಮಾಡಲು ಯತ್ನಿಸಿದ್ದರೆನ್ನಲಾಗಿದೆ. ಇದರಿಂದ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ಉಂಟಾಗಿತ್ತು. ಬಳಿಕ ಕಾರ್ಯಪ್ರವೃತ್ತರಾದ ಪೊಲೀಸರು ಮಾಲಾಧಾರಿಗಳನ್ನು ನಿಷೇಧಿತ ಸ್ಥಳದಿಂದ ತೆರವುಗೊಳಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News