ಚಿಕ್ಕಮಗಳೂರು ಉದ್ವಿಘ್ನ: ಉಪ್ಪಳ್ಳಿಯಲ್ಲಿ ಬಸ್‍ಗೆ ಕಲ್ಲು ತೂರಾಟ
Update: 2017-12-03 18:32 IST
ಚಿಕ್ಕಮಗಳೂರು,ಡಿ.3: ಬಾಬಾಬುಡಾನ್‍ಗಿಯಲ್ಲಿ ದತ್ತಜಯಂತಿಯ ಕೊನೆಯ ದಿನವಾದ ರವಿವಾರ ಅಹಿತಕರ ಘಟನೆ ನಡೆದಿದ್ದು, ಚಿಕ್ಕಮಗಳೂರು ನಗರದ ಉಪ್ಪಳ್ಳಿ ಬಡಾವಣೆಯಲ್ಲಿ ಖಾಸಗಿ ಬಸ್ಸೊಂದರ ಮೇಲೆ ದುಷ್ಕರ್ಮಿಗಳು ಕಲ್ಲೆಸೆದಿದ್ದಾರೆ.
ಕಳೆದ ಒಂದು ವಾರದಿಂದ ನಡೆಯುತ್ತಿರುವ ದತ್ತಮಾಲಾ ಅಭಿಯಾನದ ಕೊನೆ ದಿನವಾದ ಇಂದು ಚಿಕ್ಕಮಗಳೂರು ನಗರ ಅಕ್ಷರಶಃ ಉದ್ವಿಘ್ನ ಪರಿಸ್ಥಿತಿಯಲ್ಲಿದೆ. ನಗರದ ಉಪ್ಪಳ್ಳಿ ಬಡಾವಣೆಯಲ್ಲಿ ಖಾಸಗಿ ಬಸ್ಸೊಂದರ ಮೇಲೆ ದುಷ್ಕರ್ಮಿಗಳು ಕಲ್ಲು ಎಸೆದು ಗಾಜುಗಳನ್ನು ಪುಡಿಗೈದಿದ್ದಾರೆ.
ನಗರದ ಮತ್ತೊಂದು ಕಡೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಇಬ್ಬರು ಯುವಕರ ಮೇಲೂ ಹಲ್ಲೆ ನಡೆದಿರುವ ಮಾಹಿತಿ ಲಭ್ಯವಾಗಿದೆ. ಇದರಿಂದ ಚಿಕ್ಕಮಗಳೂರು ನಗರದಲ್ಲಿ ಅಘೋಷಿತ ಬಂದ್ ಏರ್ಪಟ್ಟಿದೆ.