×
Ad

ದತ್ತಪೀಠದಲ್ಲಿರುವುದು ಎಲ್ಲವೂ ನಕಲಿ ಗೋರಿಗಳು : ಸಿ.ಟಿ.ರವಿ

Update: 2017-12-03 21:18 IST

ಚಿಕ್ಕಮಗಳೂರು, ಡಿ.3:  ಸರ್ವಧರ್ಮದ ಭಾವೈಕ್ಯತಾ ಕೇಂದ್ರವಾದ ದತ್ತಾತ್ರೇಯ ಬಾಬಾಬುಡಾನಗಿರಿಯ ವಿವಾದಿತ ಸ್ಥಳದಲ್ಲಿ ಕೇಸರಿ ಧ್ವಜ ಹಾರಿಸಿದ್ದಲ್ಲದೇ ಗೋರಿ ಧ್ವಂಸಕ್ಕೆ ಯತ್ನಿಸಿದ ಘಟನೆಯನ್ನು ಶಾಸಕ ಸಿ.ಟಿ.ರವಿ ಪರೋಕ್ಷವಾಗಿ ಸಮರ್ಥಿಸಿದ್ದಾರೆ.

ದತ್ತಪೀಠದಲ್ಲಿರುವುದು ಎಲ್ಲವೂ ನಕಲಿ ಗೋರಿಗಳಾಗಿವೆ. ಹಿಂದೆ ಅಲ್ಲಿ ಮುಸಲ್ಮಾನರು ಅಷ್ಟು ಜನ ಇರಲೇ ಇಲ್ಲ. ಹಾಗಿರುವಾಗ ಈ ಗೋರಿಗಳು ಎಲ್ಲಿಂದ ಬಂತು ಎಂದು ಪ್ರಶ್ನಿಸಿದ್ದಾರೆ.

ದತ್ತಜಯಂತಿಯು ಶೇ.90 ಭಾಗ ಶಾಂತಿಯುತವಾಗಿ ನಡೆದಿದೆ. ಸಣ್ಣ ತಪ್ಪಿಗೆ ಹಿಂದೂಗಳ ಮೇಲೆ ಹಲ್ಲೆ ಮಾಡುವುದು ಸರಿಯೇ ಎಂದು ಪ್ರಶ್ನಿಸಿರುವ ಅವರು, ಹೀಗೆ ಪ್ರತೀಕಾರ ಮಾಡುವುದಾರೆ ಹಿಂದೂಗಳ ತಾಳ್ಮೆಗೆ ಬೆಲೆಯಿಲ್ಲವೇ? ಎಂದು ಪ್ರಶ್ನಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News