×
Ad

ಆಕ್ರಮಣಕ್ಕೆ ಯತ್ನಿಸಿದವರನ್ನು ಹತೋಟಿಗೆ ತಂದಿದ್ದೇವೆ : ಅಣ್ಣಾಮಲೈ

Update: 2017-12-03 22:39 IST

ಚಿಕ್ಕಮಗಳೂರು, ಡಿ.3: ಈ ಬಾರಿ ನಡೆದಿರುವುದು ಅತ್ಯಂತ ಚಾಲೆಂಜಿಂಗ್ ದತ್ತ ಜಯಂತಿ, ಎಲೆಕ್ಷನ್ ಕೂಡ ಹತ್ತಿರ ಬರುತ್ತಿರುವುದರಿಂದ ಭಾವನಾತ್ಮಕವಾದ ಇಲ್ಲಿನ ಪರಿಸ್ಥಿತಿಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿಭಾಯಿಸಿದ್ದೇವೆ. ಆದರೂ ಸಣ್ಣಪುಟ್ಟ ಅಹಿತಕರ ಘಟನೆಗಳು ನಡೆದಿದ್ದು, ಏನೂ ಆಗಿಲ್ಲ ಎಂದು ಎಸ್ಪಿ ಕೆ.ಅಣ್ಣಾಮಲೈ 'ವಾರ್ತಾಭಾರತಿ' ಸಂಪರ್ಕಿಸಿದಾಗ ಮಾಹಿತಿ ನೀಡಿದರು.

ಘೋಷಣೆಗಳು ಕೂಗಿದ್ದಾರೆ. ಒಂದು ಗೋರಿ ಬಳಿ ತೆರಳಿ ಸ್ವಲ್ಪ ಅತ್ತಿತ್ತ ಓಡಾಡಿದ್ದಾರೆ. ಅದು ಬಿಟ್ಟರೆ ನಗರದಲ್ಲಿ ಸಣ್ಣಪುಟ್ಟ ಕಿರಿಕ್ ಗಳು ನಡೆದಿವೆ. ಆಕ್ರಮಣಕ್ಕೆ ಯತ್ನಿಸಿದವರನ್ನು ಹತೋಟಿಗೆ ತಂದಿದ್ದೇವೆ ಎಂದು ತಿಳಿಸಿದರು.

ಗಿರಿಯಲ್ಲಿ ನಿಷೇಧಿತ ಪ್ರದೇಶವನ್ನು ಯಾರೂ ಉಲ್ಲಂಘಿಸಿಲ್ಲ. ಗಿರಿಯಲ್ಲಿ ಎರಡು ಪ್ರದೇಶವಿದ್ದು, ನಿಷೇಧಿತ ಪ್ರದೇಶದಲ್ಲಿ ಗೋರಿಗಳಿದ್ದು, ಮತ್ತೊಂದು ಗೋರಿಗಳಿರುವ ಪ್ರದೇಶವು ನಿಷೇಧಿತವಲ್ಲ. ನಿಷೇದಿತವಲ್ಲದ ಪ್ರದೇಶದಲ್ಲಿ ಗೋರಿಗಳ ಮೇಲೆ ಆಕ್ರಮಣ ನಡೆದಿದೆ. ನಿಷೇಧಿತ ಪ್ರದೇಶದೊಳಗೆ ನುಗ್ಗಲು ಬಂದವರನ್ನು ಹಿಂದಕ್ಕೆ ತಳ್ಳಿ ನುಗ್ಗುವ ಯತ್ನವನ್ನು ವಿಫಲಗೊಳಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಗೋರಿಯೊಂದರ ಕಲ್ಲನ್ನು ಹಾನಿಗೊಳಿಸಲು ಪ್ರಯತ್ನಿಸಿದ್ದರು. ಅದನ್ನು ತಕ್ಷಣ ಸರಿಪಡಿಸಲಾಗಿದೆ. ಅಲ್ಲಿ ಯಾವುದೇ ಧ್ವಂಸದಂತಹ ಕೃತ್ಯಗಳು ನಡೆದಿಲ್ಲ ಎಂದ ಅವರು, ನಗರದಲ್ಲಿ ಗುಂಪುಗೂಡುತ್ತಿದ್ದ ಜನರನ್ನು ನಿಯಂತ್ರಿಸಲಾಗಿದೆ. ಯಾವುದೇ ದೊಡ್ಡ ಮಟ್ಟದ ಅಹಿತಕರ ಘಟನೆಗಳು ನಡೆದಿಲ್ಲ ಎಂದು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News