×
Ad

ಸಿದ್ದಾಪುರ :ಮೀಲಾದುನ್ನೆಬಿ ಆಚರಣೆ

Update: 2017-12-03 23:51 IST

ಸಿದ್ದಾಪುರ (ಉ.ಕ),  ಡಿ.3: ಪ್ರವಾದಿ ಮಹಮ್ಮದ್ ಪೈಗಂಬರ್‍ರವರ ಜನ್ಮದಿನದ ನಿಮಿತ್ತ ಈದ್ ಮಿಲಾದ್ ಸೌಹಾರ್ದ ಕಮಿಟಿ ವತಿಯಿಂದ ಶನಿವಾರ ಮೀಲಾದುನ್ನೆಬಿ ಸೌಹಾರ್ದ ಸಮಾವೇಶ ನಡೆಯಿತು. 

ಶನಿವಾರ ಬೆಳಿಗ್ಗೆ 10 ಗಂಟೆಗೆ ಹಾಳದಕಟ್ಟಾದ ಶ್ರೀ ಮುರುಗರಾಜೇಂದ್ರ ಅಂಧರ ಶಾಲೆಯ ಮಕ್ಕಳಿಗೆ ಹಣ್ಣು ಹಂಪಲು ವಿತರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಸಮಾಜದ ಅನೇಕ ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು.

ಮಧ್ಯಾಹ್ನ  ಮಸೀದಿಯಿಂದ ಹೊರಟು ಸಿದ್ದಾಪುರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.  ಈ ಸಮಾವೇಶವನ್ನು ಸಿದ್ದಾಪುರದ ಶಿಕ್ಷಣ ಪ್ರಸಾರಕ ಸಮಿತಿ ಉಪಾಧ್ಯಕ್ಷರಾದ ಡಾ,ಶಶಿಭೂಷಣ ಹೆಗಡೆ ಉದ್ಘಾಟಿಸಿದರು, ಈ ಸಮಾವೇಶದ ಅಧ್ಯಕ್ಷತೆಯನ್ನು ಬದ್ರಿಯಾ ಜಾಮೀಯಾ ಮಸೀದಿ ಕಮೀಟಿ ಅಕ್ಷರಾದ ಮೆಹಬೂಬ್ ಅಲಿ ಅಹಮ್ಮದ್ ಬಾಬಾ ಜಾನ್ ವಹಿಸಿದ್ದರು, ಅತಿಥಿಗಳಾಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನಾಗರಾಜ ಮಾಳ್ಕೋಡು, ತಾಮೀರ್ ಸೊಸೈಟಿ ನಿರ್ದೇಶಕರಾದ ಮುಹಮದ್ ಬಶೀರ್ ಸಾಬ್ ಬೇಡ್ಕಣಿ, ರಾಜ್ಯ ಜೆಡಿಎಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷರಾದ ತಿಮ್ಮಪ್ಪ ಎಂ.ಕೆ, ಹಿರಿಯ ಸಾಮಾಜಿಕ ಧುರೀಣರಾದ ಮೀರಾ ಸಾಹೇಬ್, ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯರಾದ ಟಿ.ಕೆ ಎಂ ಅಜಾದ್, ಈದ್ ಮಿಲಾದ್ ಕಮೀಟಿ ಸಂಚಾಲಕರಾದ ಮುನವ್ವರ್ ಗುರ್ಕಾರ್ ಉಪಸ್ಥಿತರಿದ್ದರು. 
ಈ ಸಂದರ್ಭದಲ್ಲಿ ಜಿಲ್ಲಾಮಟ್ಟದ ಉತ್ತಮ ಪ್ರಶಸ್ತಿ ಪುರಸ್ಕøತರಾದ ಜನಾಬ್ ಅಬ್ದುಲ್ ಖಾದಿರ್ ಕಂಚೀರವರನ್ನು ಸನ್ಮಾನಿಸಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News