ಅಣ್ಣಾಮಲೈ ಮಾತ್ರವಲ್ಲ ಪೊಲೀಸ್ ಪೇದೆಯಿಂದಲೂ ನಾನು ಕಲಿಯಬೇಕಿದೆ
Update: 2017-12-04 12:26 IST
ಮೈಸೂರು , ಡಿ.4: ಹೌದು ಅಣ್ಣಾಮಲೈ, ಅಧಿಕಾರಿಗಳಿಂದ ನಾನು ಕಲಿಯಬೇಕಿದೆ ಪೊಲೀಸ್ ಪೇದೆಯಿಂದಲೂ ನಾನು ಕಲಿಯಬೇಕಿದೆ ಎಂದು ಮೈಸೂರು ಎಸ್ಪಿ ಡಿ.ರವಿ ಚನ್ನಣ್ಣನವರ್ ಹೇಳಿದ್ದಾರೆ.
ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಸಂಸದ ಪ್ರತಾಪ್ ಸಿಂಹ ಅವರು ಟ್ವಿಟ್ಟರ್ ನಲ್ಲಿ ‘ಆಳುವವರ ಆಳು ’ ಎಂದು ಟ್ವೀಟ್ ಮಾಡಿದಕ್ಕೆ ತಿರುಗೇಟು ನೀಡಿದ್ದಾರೆ
“ನಾವು ಎಂದೂ ಪರಿಪೂರ್ಣರಲ್ಲ.ಕಲಿಯುವುದು ಇದ್ದೇ ಇರುತ್ತದೆ.. ಸಂಸದರ ಬಗ್ಗೆ ನಮಗೆ ಅಪಾರ ಗೌರವ ಇದೆ. ನಾನು ಯಾರ ಅಣತಿಯಂತೆ ಕೆಲಸ ಮಾಡುತ್ತಿಲ್ಲ. ಯಾರ ಪರವೂ ಇಲ್ಲ. ವಿರುದ್ಧವೂ ಇಲ್ಲ . ಸಂವಿಧಾನವೇ ನನಗೆ ಶ್ರೇಷ್ಠ.’’ ಎಂದು ಹೇಳಿದ್ದಾರೆ.