×
Ad

ಹನೂರು : ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ

Update: 2017-12-04 18:15 IST

ಹನೂರು,ಡಿ.4:ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಆಡಳಿತಕ್ಕೆ ಬಂದ ನಂತರ ಗ್ರಾಮೀಣ ಪ್ರದೇಶಗಳ ಅಭಿವೃದ್ದಿಗೆ ಹೆಚ್ಚು ಒತ್ತು ನೀಡುವುದರ ಮೂಲಕ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ಗ್ರಾಮಸ್ಥರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ.ಆರ್ ನರೇಂದ್ರ ರಾಜೂಗೌಡ  ತಿಳಿಸಿದರು.

ಹನೂರು ಸಮೀಪದ ಬಂಡಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಸವ ವಸತಿ ಮತ್ತು ರಾಜೀವ್ ಗಾಂಧಿ ವಸತಿ ನಿಗಮದ 129 ಫಲಾನುಭವಿಗಳಿಗೆ ಮನೆ ಮಂಜೂರಾತಿ ಮತ್ತು ಕಾಮಾಗಾರಿ ಆದೇಶ ಪ್ರತಿಯನ್ನು ವಿತರಣೆ ಮಾಡಿಲಾಯಿತು. 

ಕಳೆದ ಎರಡು ಮೂರು ವರ್ಷಗಳಲ್ಲಿ ಬಂಡಳ್ಳಿ ಗ್ರಾಮ ಪಂಚಾಯತ್ ಗೆ ಒಟ್ಟು 568 ಮನೆಗಳನ್ನು ಮಂಜೂರು ಮಾಡಿದ್ದು, 2013-14 ನೇ ಸಾಲಿನಲ್ಲಿ 75 ಮನೆಗಳು, 2014-15 ನೇ ಸಾಲಿನಲ್ಲಿ 44 ಮನೆಗಳು, 2015-16 ನೇ ಸಾಲಿನಲ್ಲಿ 312, ಅದರಂತೆ 2017-18 ಸಾಲಿನಲ್ಲಿ 129 ಮನೆಗಳಿಗೆ ನಿರ್ಮಾಣ ಮಾಡಿಕೊಳ್ಳಲು ಫಲಾಭುವಿಗಳಿಗೆ ಹಕ್ಕು ಪತ್ರವನ್ನು ವಿತರಿಸುತ್ತಿದ್ದು, ಪಲಾನುಭವಿಗಳು ಆದಷ್ಟು ಬೇಗ ಮನೆಗಳನ್ನು ನಿರ್ಮಾಣಮಾಡಿಕೂಳ್ಳಬೇಕು ಮತ್ತು ಬಂಡಳ್ಳಿ ಗ್ರಾಮ ಪಂಚಾಯತ್ ನ್ನು ಸುವರ್ಣ ಗ್ರಾಮ ಯೋಜನೆಯಡಿ ಸೇರಿಸಿ ಸುಮಾರು 2 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ದಿಗೆ ಒತ್ತು ನೀಡಲಾಗಿದ್ದು  ಗ್ರಾಮದ ಪ್ರತಿ ಬಡವಾಣೆಗೂ ಸಹ ಎಸ್.ಸಿ.ಪಿ ಟಿ.ಎಸ್.ಪಿ ಯೋಜನೆಯಡಿ ಕಾಂಕ್ರೀಟ್  ರಸ್ತೆಯನ್ನು ಕಾಮಗಾರಿಗಳನ್ನು ಮಾಡಲಾಗಿದೆ  ಎಂದು ತಿಳಿಸಿದರು.

ಬೆಡಗಂಪಣರ ಜನಾಂಗಕ್ಕೆ700 ಮನೆಗಳ ನಿರ್ಮಾಣಕ್ಕೆ ಹಕ್ಕು ಪತ್ರ ವಿತರಣೆ :  ಹನೂರು ಕ್ಷೇತ್ರ ವ್ಯಾಪ್ತಿಯಲ್ಲಿ ಮಲೈಮಹದೇಶ್ವರ ಬೆಟ್ಟದಲ್ಲಿ ಮತ್ತು ಮಾರ್ಟಳ್ಳಿ ಜಿಲ್ಲಾ ಪಂಚಾಯತಿಗಳಲ್ಲಿ ಹೆಚ್ಚು ವಾಸಿಸುವ ಈ ಬೆಡಗಂಪಣಜನಾಂಗದವರನ್ನು ಹಿಂದೆ ಇದ್ದ ಸರ್ಕಾರ ಕಡೆಗಣಿಸಿತ್ತು,  ನಂತರ ರಾಜ್ಯದಲ್ಲಿ  ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ  ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಲೈಮಹದೇಶ್ವರಬೆಟ್ಟಕ್ಕೆ ಆಗಮಿಸಿದಾಗ ಬೆಡಗಂಪಣರ ಜನಾಂಗದ 318 ಪಲಾನುಭವಿಗಳಿಗೆ  ಮನೆ ನಿರ್ಮಾಣ ಮಾಡಲು ಆದೇಶ ಪ್ರತಿ ಕೊಡಿಸಲಾಗಿತ್ತು ಎಂದರು.

ಈ ಜನಾಂಗದವರು ಹನೂರು ಕ್ಷೇತ್ರ ವ್ಯಾಪ್ತಿಯಲ್ಲಿ ಹಿಂದುಳಿದ ಜನಾಂಗದವರಾಗಿದ್ದು ಕೂಲಿ ಮಾಡಿ ಜೀವನ ನಡೆಸುತ್ತಿದ್ದಾರೆ ಮನೆ ನಿರ್ಮಿಸಿಕೂಳ್ಳವ ಶಕ್ತಿ ಇಲ್ಲ ಎಂದು ವಾಸ್ತಾವಂಶವನ್ನು  ಮುಖ್ಯಮಂತ್ರಿಗಳ ಬಳಿ ತಿಳಿಹೇಳಿದಾಗ ಕಳೆದ ತಿಂಗಳು 400 ಮನೆಗಳನ್ನು ಬಿಡುಗಡೆ ಮಾಡಿಕೂಟ್ಟಿದ್ದಾರೆ. ಹನೂರು ಕ್ಷೇತ್ರ ವ್ಯಾಪ್ತಿಯ  ಬೆಡಗಂಪಣರ ಜನಾಂಗದವರಿಗರ ಒಟ್ಟು 700 ಮನೆ ನಿರ್ಮಾಣ ಮಾಡಲು ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.

ಇದೇ ಸಂಧರ್ಭದಲ್ಲಿ ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಜವಾದ್ ಅಹ್ಮದ್, ಬಂಡಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಜಮ್ಮ, ಸದಸ್ಯರಾದ ಶಾಹುಲ್ ಅಹಮದ್,  ಸಣ್ಣಮಾದಪ್ಪ ,ಪ್ರಸನ್ನಕುಮಾರ್ ವೆಂಕಟೇಶ್ ,ಮುಖಂಡರಾದ ಲಿಂಗರಾಜು, ದೊಡ್ಡಕುನ್ನನಾಯಕ, ಪಿಡಿಒ ನಮೀತಾ ತೇಜಗೌಡ ಹಾಗೂ ಇನ್ನಿತರರು ಹಾಜರಿದ್ದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News