×
Ad

ಮಕ್ಕಳ ಕಲಿಕೆಯ ವಾತಾವರಣ ಸೃಷ್ಟಿಸಿ : ಗೃಹ ಸಚಿವ ರಾಮಲಿಂಗಾರೆಡ್ಡಿ

Update: 2017-12-04 19:26 IST

ಬೆಂಗಳೂರು, ಡಿ. 4: ಮಕ್ಕಳಲ್ಲಿ ಕಲಿಕಾ ಆಸಕ್ತಿ ಬೆಳೆಸುವುದರೊಂದಿಗೆ ಕಲಿಯಲು ಕಾಲೇಜುಗಳಲ್ಲಿ ಉತ್ತಮ ವಾತಾವರಣ ನಿರ್ಮಿಸುವ ಅಗತ್ಯವಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.

ಸೋಮವಾರ ಕೆನರಾ ಬ್ಯಾಂಕ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಮತ್ತು ರೀಜನಲ್ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್ ಆಶ್ರಯದಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ಏರ್ಪಡಿಸಿದ್ದ ‘ಮೇಕಿಂಗ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಮ್ಯಾಟರ್’ ಕುರಿತ ಜಾಗತಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ನಿರ್ವಹಣಾ ಕುರಿತ ಅಧ್ಯಯನಕ್ಕೆ ವಿದೇಶಕ್ಕೆ ಹೋಗುತ್ತಾರೆ. ಅಲ್ಲಿನ ಶಿಕ್ಷಣ ಪದ್ಧತಿ, ವಿಷಯ, ವಿಚಾರಗಳು ಮತ್ತು ಬೋಧನಾ ಶೈಲಿಗೆ ಮನಸೋಲುತ್ತಿದ್ದಾರೆ. ನಿರ್ವಹಣಾ ವಿಷಯದ ಅಭ್ಯಾಸಕ್ಕೆ ವಿದ್ಯಾರ್ಥಿಗಳು ವಿದೇಶಕ್ಕೆ ಹೋಗದಂತೆ ತಡೆಗಟ್ಟಲು, ಕಲಿಯುವ ವಾತಾವರಣ ಸೃಷ್ಟಿಸುವ ಜತೆಗೆ ಕಾಲೇಜಿನ ಕ್ಯಾಂಪಸ್‌ನ ವಾತಾವರಣವನ್ನೂ ಅಭಿವೃದ್ಧಿ ಪಡಿಸಬೇಕೆಂದು ತಿಳಿಸಿದರು.

ಎಚ್‌ಇಸಿ ಪ್ಯಾರಿಸ್‌ನ ಪ್ರೊ.ವೋಲ್ಫ್‌ಗ್ಯಾಂಗ್ ಸಿ.ಅಮನ್ ಮಾತನಾಡಿ, ಜಗತ್ತು ದಿನ ಕಳೆದಂತೆ ಸಮಸ್ಯೆಗಳೊಳಗೆ ಸಿಲುಕುತ್ತಿದೆ. ಆದರೆ ನಮಗೆ ನಮ್ಮ ಸುತ್ತಲಿನ ಸಮಸ್ಯೆಗಳ ಕುರಿತು ಅರಿವಿಲ್ಲ. ಉತ್ತಮ ನಿರ್ವಹಣೆಯಿಂದ ಮಾತ್ರ ಜಗತ್ತಿನ ಭವಿಷ್ಯ ರೂಪಿಸಬಹುದು. ನಿರ್ವಹಣಾ ಕ್ಷೇತ್ರದಲ್ಲಿ ಬುದ್ಧಿವಂತಿಕೆಯ ಕೆಲಸ ಅಗತ್ಯ. ಕಷ್ಟಗಳನ್ನು ಎದುರಿಸುವಂತಹ ಕೌಶಲ್ಯಗಳನ್ನು ಬೆಳೆಸಿಕೊಳ್ಳಿ. ಉತ್ತಮ ನಿರ್ವಹಣೆ ಸಮಸ್ಯೆಗಳನ್ನು ಬಗೆಹರಿಸುವುದಲ್ಲದೆ, ಸಮಸ್ಯೆಗಳು ಬರದಂತೆ ಎಚ್ಚರ ವಹಿಸುವುದು, ಎಲ್ಲಕ್ಕಿಂತ ಮಾನವೀಯತೆ ಮುಖ್ಯ ಎಂದರು.

ಕೆನರಾ ಬ್ಯಾಂಕ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ನಿರ್ದೇಶಕ ಡಾ. ಜನಾರ್ದನಮ್, ಬೆಂ.ಕೇಂದ್ರ ವಿವಿ ಕುಲಪತಿ ಪ್ರೊ.ಎಸ್.ಜಾಫೆಟ್, ಪ್ರಾಧ್ಯಾಪಕ ಶಿವ ಕೆ.ತ್ರಿಪತಿ, ಆರ್‌ಸಿಎಂನ ಅಧ್ಯಕ್ಷ ಪರೋಸತ್ಯ ರಂಜನ್ ಮಂದಲ್ ಹಾಗೂ ಜರ್ಮನಿ ಡಯಲಾಗ್ ಆಫ್ ಸಿಲೈಸೇಶನ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪೂರ್ಣಚಂದ್ರ ಪಾಂಡೆ, ನೆದರ್‌ಲ್ಯಾಂಡ್‌ನ ಪ್ರೊ.ಜಾಸ್ ವ್ಯಾನ್ ಲ್ಲಗರ್ಸ್‌ಬರ್ಗ್, ಆಯುಕ್ತ ಡಾ.ಪಿ.ಸಿ.ಜಾಫರ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News